More

    ‘AK Vs AK’ ಸಿನಿಮಾದ ಟ್ರೇಲರ್ ವಿವಾದ; ಏರ್ ಫೋರ್ಸ್ ಬಳಿ ಕ್ಷಮೆ ಕೇಳಿದ ಅನಿಲ್ ಕಪೂರ್!

    ಮುಂಬೈ: ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದ ‘AK vs AK’ ಚಿತ್ರದ ಟ್ರೇಲರ್​ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟ್ರೇಲರ್​ನಲ್ಲಿ ಇಂಡಿಯನ್ ಏರ್​ಫೋರ್ಸ್​ಗೆ ಅವಮಾನ ಮಾಡಲಾಗಿದೆ ಎಂದು ಏರ್​ಫೋರ್ಸ್ ಆರೋಪಿಸಿತ್ತು. ಅಷ್ಟೇ ಅಲ್ಲ ಟ್ರೇಲರ್​ನಲ್ಲಿ ಅನಿಲ್ ಕಪೂರ್ ಧರಿಸಿದ ಏರ್​ಫೋರ್ಸ್ ಸಮವಸ್ತ್ರದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಈ ಎಲ್ಲ ಬೆಳವಣಿಗೆಗೆ ಸಂಬಂಧಪಟ್ಟಂತೆ ನಟ ಅನಿಲ್ ಕಪೂರ್ ಕ್ಷಮೆಯಾಚಿಸಿದ್ದಾರೆ.

    ಇದನ್ನೂ ಓದಿ: ಡ್ರಗ್ ಮಾಫಿಯಾ ಬಳಿಕ ಇದೀಗ ಲ್ಯಾಂಡ್​ ಮಾಫಿಯಾ ವಿರುದ್ಧ ಸಲ್ಮಾನ್​ ಖಾನ್ ಧ್ವನಿ!

    ‘Ak Vs Ak’ ಟ್ರೈಲರ್‌ನಿಂದ ಕೆಲವರಿಗೆ ನೋವು ಆಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲಿ ನಾನು ಅಸಂಬದ್ಧ ಭಾಷೆಯನ್ನು ಬಳಸುವಾಗ ವಾಯುಪಡೆಯ ಸಮವಸ್ತ್ರ ಧರಿಸಿರುತ್ತೇನೆ. ಹಾಗಾಗಿ ಸೇನೆಯ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ಚಿತ್ರದ ಹೀರೋ ನಟಿಸುವಾಗ ಆ ವಸ್ತ್ರವನ್ನು ಧರಿಸಿರುತ್ತಾನೆ. ಇದು ಉದ್ದೇಶಪೂರ್ವಕವಾಗಿ ನಡೆದ ಪ್ರಮಾದವಲ್ಲ. ಮಗಳು ಕಿಡ್ನಾಪ್ ಆಗುತ್ತಾಳೆ. ಆಗ ಆತನ ವರ್ತನೆ ಹೇಗಿರುತ್ತದೆ ಎಂಬುದನ್ನು ತೋರಿಸಿದ್ದೇವೆ. ನನಗೆ ಇಂಡಿಯನ್ ಏರ್​ಫೋರ್ಸ್ ಮೇಲೆ ತುಂಬ ಗೌರವವಿದೆ. ದಯಮಾಡಿ ನನ್ನಿಂದ ಕ್ಷಮೆ ಇರಲಿ. ಎಂದಿದ್ದಾರೆ.

    ಅಂದಹಾಗೆ, ಅನುರಾಗ್ ಕಶ್ಯಪ್​ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಡಿ. 24ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್​ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಅನಿಲ್ ಕಪೂರ್​ ಜತೆಗೆ ಸಹೋದರ ಬೋನಿ ಕಪೂರ್. ಸೋನಮ್ ಕಪೂರ್, ಜಾಹ್ನವಿ​ ಸಹ ಈ ಸಿನಿಮಾದಲ್ಲಿದ್ದಾರೆ. (ಏಜೆನ್ಸೀಸ್​)

    ನಿರ್ಮಾಪಕರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts