ಐಶ್ವರ್ಯಾ ಬಳಿಕ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ​!

Soundarya Rahinikanth
Published on

ಚೆನ್ನೈ: ಕೆಲ ತಿಂಗಳುಗಳ ಹಿಂದೆ ಸೂಪರ್​ ಸ್ಟಾರ್​ ರಜಿನಿಕಾಂತ್​ ಅವರ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್​, ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸುಮಾರು 60 ಸವರನ್​ ಚಿನ್ನವನ್ನು ಐಶ್ವರ್ಯಾ ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮನೆಯ ಕೆಲಸದವಳಾದ ಈಶ್ವರಿ ಎಂಬಾಕೆಯನ್ನು ಬಂಧಿಸಲಾಗಿತ್ತು. ಈ ಪ್ರಕರಣ ಭಾರೀ ಸುದ್ದಿಯಾಗಿತ್ತು.

ಇದೀಗ ರಜನಿಕಾಂತ್​ ಅವರ ಎರಡನೇ ಪುತ್ರಿ ಸೌಂದರ್ಯ ರಜಿನಿಕಾಂತ್​ ಕೂಡ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಏಪ್ರಿಲ್​ 23ರಂದು ನನ್ನ ಮನೆಯಿಂದ ತೆನಾಂಪೇಟೆಯಲ್ಲಿನ ಕಾಲೇಜಿಗೆ ರೇಂಜ್​ ರೋವರ್​ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ವೇಳೆ ನನ್ನ ಪೌಚ್​ನಲ್ಲಿ ಇಟ್ಟಿದ್ದ ಐಷಾರಾಮಿ ಕಾರಿನ ಹೆಚ್ಚುವರಿ ಕೀ ಕಳೆದು ಹೋಗಿದೆ. ಹುಡುಕಿ ಕೊಡಿ ಎಂದು ಠಾಣೆಯಲ್ಲಿ ಪೊಲೀಸರ ನೆರವು ಕೋರಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ಸಹ ದಾಖಲಿಸಿಕೊಂಡಿದ್ದು, ಕೀಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇನ್ನು ರಜಿನಿಕಾಂತ್​ ಅವರ ಸಿನಿಮಾ ವಿಚಾರಕ್ಕೆ ಬಂದರೆ, ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ ಮತ್ತು ಸನ್​ ಪಿಕ್ಚರ್ಸ್​ ನಿರ್ಮಾಣದ ಜೈಲರ್​ ಸಿನಿಮಾದಲ್ಲಿ ನಟಸಿದ್ದಾರೆ. ಈ ಸಿನಿಮಾ ಆಗಸ್ಟ್​ 10ರಂದು ವಿಶ್ವದಾದ್ಯಾಂತ ಬಿಡುಗಡೆಯಾಗಲಿದೆ. ಇನ್ನೊಂದೆಡೆ ತಮ್ಮ ಮಗಳು ಐಶ್ವರ್ಯಾ ರಜನಿಕಾಂತ್​ ನಿರ್ದೇಶನದ ಲಾಲ್​ ಸಲಾಂ ಸಿನಿಮಾದಲ್ಲಿ ರಜಿನಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net