

ಬೆಂಗಳೂರು: ಟಿಕ್ಟಾಕ್ ಅಭಿಮಾನಿಗಳಿಗೆ ಸೋನು ಶ್ರೀನಿವಾಸ ಗೌಡ ಅತ್ಯಂತ ಪರಿಚಯದ ಹುಡುಗಿ. ಟಿಕ್ಟಾಕ್ನಲ್ಲಿ ಪ್ರತಿಭೆಯೊಂದಿಗೆ ವಾದ ವಿವಾದ, ಜಗಳದಿಂದಲೇ ಈಕೆ ಪ್ರಸಿದ್ಧರಾಗಿದ್ದರು. ಇದೀಗ ಈ ಸೋನು ಗೌಡ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಡುತ್ತಿದ್ದಾರೆ. ನಟಿ ಅದ್ವಿತಿ ಶೆಟ್ಟಿಯೊಂದಿಗೆ ತೆರೆ ಹಂಚಿಕೊಳ್ಳುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಧರ್ಮ ಕೀರ್ತಿರಾಜ್ ನಾಯಕ ನಟನಾಗಿ ಮತ್ತು ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿರುವ ಕ್ಯಾಡ್ಬರೀಸ್ ಸಿನಿಮಾದಲ್ಲಿ ಸೋನು ಗೌಡ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ. ನನ್ನ ಟಿಕ್ಟಾಕ್ಗಳನ್ನು ನೋಡಿ ಸಿನಿಮಾಗೆ ನೇರವಾಗಿ ಆಯ್ಕೆ ಮಾಡಿದ್ದಾರೆ. ನಾನು ಎಲ್ಲಿಯೂ ಆಡಿಷನ್ ನೀಡಿಲ್ಲ ಎಂದೂ ಆಕೆ ತಿಳಿಸಿದ್ದಾರೆ.
ಬರೀ ಸಿನಿಮಾ ಮಾತ್ರವಲ್ಲ, ವೆಬ್ ಸಿರೀಸ್ ಮತ್ತು ಶಾರ್ಟ್ ಸಿನಿಮಾಗಳಲ್ಲೂ ಈಕೆ ಬಣ್ಣ ಹಚ್ಚಿದ್ದಾರಂತೆ. ಈಕೆ ಅಭಿನಿಯಿಸಿರುವ ಮೊದಲ ವೆಬ್ ಸಿರೀಸ್ ಕೆಲ ದಿನಗಳಲ್ಲೇ ಬಿಡುಗಡೆಯಾಗಲಿದೆಯಂತೆ. ಟಿಕ್ಟಾಕ್ ಮಾಡಿದಷ್ಟು ಸುಲಭವಲ್ಲ ಈ ಸಿನಿಮಾವೆಂದು ಆಕೆ ಹೇಳಿಕೊಂಡಿದ್ದಾರೆ. ಕ್ಯಾಡ್ಬರೀಸ್ ಜತೆಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಎಲ್ಲ ಸಿನಿಮಾಗಳಲ್ಲೂ ಬೋಲ್ಡ್ ಪಾತ್ರವನ್ನೇ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಈಗ ಅದರಿಂದಲೇ ಆರಂಭಿಸಿದರೆ ಮುಂದೆ ಬೇರೆ ಪಾತ್ರಗಳಿಗೆ ಅವಕಾಶ ಸಿಗುವುದಿಲ್ಲವೆಂದು ನಾನೇ ಸುಮ್ಮನಾಗಿದ್ದೇನೆ. ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)