ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್​ ಶೀಲ್ಡ್​ ಕೊಟ್ಟ ಸೋನು ಸೂದ್​

Sonu Sood - Final
Published on

ಲಾಕ್​ಡೌನ್​ ಶುರುವಾದ ನಂತರ ವಲಸೆ ಕಾರ್ಮಿಕರನ್ನು ತಮ್ಮ ತವರೂರಿಗೆ ತಲುಪಿಸುವುದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದ ಸೋನು, ಇದೀಗ ಬಹಳಷ್ಟು ಜನರನ್ನು ತಮ್ಮ ಊರಿಗೆ ಸೇರಿಸಿ ನಿಟ್ಟುಸಿರುಬಿಟ್ಟಿದ್ದಾರೆ.

ಹಾಗಂತ ಕೆಲಸ ಮುಗಿಯಿತು ಎಂದು ಅವರು ಸುಮ್ಮನೆ ಕುಳಿತಿಲ್ಲ. ತಮ್ಮ ಕೈಲಾದಷ್ಟು ಸಹಾಯವನ್ನು ಅವರು ಮುಂದುವರೆಸಿದ್ದಾರೆ. ಇದೀಗ ಅವರು ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್​ ಶೀಲ್ಡ್​ ಗಳನ್ನು ಕೊಟ್ಟಿದ್ದಾರೆ.

ಗುರುವಾರ ಮಹಾರಾಷ್ಟ್ರದ ಗೃಹ ಸಚಿವ ಅನಿಲ್​ ದೇಶ್ಮುಖ್​ ಅವರನ್ನು ಭೇಟಿ ಮಾಡಿದ ಸೋನು, ಈ ಕುರಿತು ಮಾತನಾಡಿರುವ ಅವರು, ಅಗತ್ಯವಿರುವ ನೆರವನ್ನು ಕೊಡುವುದಕ್ಕೆ ಸಿದ್ಧ ಎಂದು ಹೇಳಿದ್ದಾರೆ.

ಸೋನು ಅವರ ಈ ಕೆಲಸಕ್ಕೆ ಖುಷಿಯಾಗಿರುವ ಗೃಹ ಸಚಿವರು, ಸೋನುಗೆ ಥ್ಯಾಂಕ್ಸ್​ ಹೇಳಿರುವುದಷ್ಟೇ ಅಲ್ಲ, ಅವರ ಜತೆಗಿರುವ ಎರಡು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, 'ನನ್ನ ಪೊಲೀಸ್​ ಸಹೋದರರು ಮತ್ತು ಸಹೋದರಿಯರೇ ಈ ಸಂದರ್ಭದಲ್ಲಿ ನಿಜವಾದ ಹೀರೋಗಳು. ಅವರು ಮಾಡುತ್ತಿರುವ ಸೇವೆಗೆ, ನಾನು ಮಾಡುತ್ತಿರುವುದು ಬಹಳ ಕಡಿಮೆಯೇ' ಎಂದು ಟ್ವೀಟ್​ ಮಾಡಿದ್ದಾರೆ.

ಈ ಮಧ್ಯೆ, ಸೋನು ತಮ್ಮ ಲಾಕ್​ಡೌನ್​ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಅನುಭವಗಳಾಗಿವೆಯಂತೆ. ಅವನ್ನೆಲ್ಲಾ ನಾಲ್ಕು ಜನರಿಗೆ ತಲುಪಿಸುವ ಉದ್ದೇಶದಿಂದ ಅವರು ಪುಸ್ತಕ ಬರೆಯುವುದಕ್ಕೆ ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ಅವರಿನ್ನೂ ಈ ಪುಸ್ತಕಕ್ಕೆ ಹೆಸರಿಟ್ಟಿಲ್ಲ. ವರ್ಷದ ಕೊನೆಗೆ ಈ ಪುಸ್ತಕದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವುದಾಗಿ ಅವರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net