

ಮುಂಬೈ: ನಟ ಸೋನು ಸೂದ್ ಸಾಮಾಜಿಕ ಕೆಲಸದ ಜತೆಗೆ ದೇಶದ ಜನರ ಮನಗೆದ್ದಿದ್ದಾರೆ. ಬೇಡಿದವರಿಗೆ ಕೈಲಾದ ಮಟ್ಟಿಗೆ ಸೇವೆ ಒದಗಿಸುತ್ತಿದ್ದಾರೆ. ಸೋನು ಸೂದ್ ಫೌಂಡೇಷನ್ ಮೂಲಕ ಎಲ್ಲರಿಗೂ ನೆರವಾಗುತ್ತಿದ್ದಾರೆ. ಇದೆಲ್ಲದರ ಜತೆಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರ ಕಮೆಂಟ್ಗಳಿಗೆ ಅಷ್ಟೇ ಚೆನ್ನಾಗಿ ತಮಾಷೆಯ ಉತ್ತರವನ್ನೂ ನೀಡುತ್ತಿರುತ್ತಾರೆ.
ಇದನ್ನೂ ಓದಿ: 24 ವರ್ಷಗಳ ಹಿಂದಿನ ಫೋಟೋ ಈಗ ವೈರಲ್ ಆಗ್ತಿದೆ …
ಬಾಲಕಿಯೊಬ್ಬಳ ಆರೋಗ್ಯ ಸಮಸ್ಯೆಗೆ ಕ್ಷಿಪ್ರಗತಿಯಲ್ಲಿ ಸೋನು ಸೂದ್ ನೆರವಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಾಲಕಿಯನ್ನು ಡಿಸ್ಚಾರ್ಜ್ ಸಹ ಮಾಡಲಾಗಿತ್ತು. ನಿಮ್ಮ ಸಹಾಯಕ್ಕೆ ತುಂಬು ಹೃದಯದ ಧನ್ಯವಾದ ಎಂದೂ ಆ ಕುಟುಂಬ ಟ್ವಿಟ್ ಮೂಲಕ ಸೋನುಗೂ ಹೇಳಿತ್ತು. ಅದಕ್ಕೆ ಪ್ರತಿಯಾಗಿ ‘ಮತ್ತೇನಾದರೂ ಸೇವೆ ಇದ್ದರೆ ತಿಳಿಸಿ’ ಎಂದು ಸೋನು ಪ್ರತಿಕ್ರಿಯೆ ನೀಡಿದ್ದರು. ಹೀಗಿರುವಾಗಲೇ ಆ ಪೋಸ್ಟ್ಗೆ ಇಂಜಿನಿಯರ್ ಲಡ್ಕಾ ಹೆಸರಿನ ಟ್ವಿಟರ್ ಖಾತೆಯಿಂದ ಬೇಡಿಕೆಯೊಂದು ತೇಲಿ ಬಂದಿತ್ತು. ಅದಕ್ಕೆ ಅಷ್ಟೇ ಹಾಸ್ಯಭರಿತವಾಗಿ ಉತ್ತರ ನೀಡಿದ್ದಾರೆ ಸೋನು.
‘ಭಾಯ್, ನನ್ನ ಗರ್ಲ್ಫ್ರೆಂಡ್ ಐಫೋನ್ ಕೇಳುತ್ತಿದ್ದಾಳೆ. ಅದಕ್ಕೆ ನೀವೇನಾದರೂ ಸಹಾಯ ಮಾಡಲು ಸಾಧ್ಯವೇ?’ ಎಂದು ಯುವಕ ಬೇಡಿಕೆ ಇಟ್ಟಿದ್ದ. ಅದಕ್ಕೆ ಉತ್ತರಿಸಿದ ಸೋನು ಸೂದ್, ‘ನನಗದು ಗೊತ್ತಿಲ್ಲ, ಆದರೆ, ನಾನು ಐಫೋನ್ ನೀಡಿದರೆ, ಅದರಿಂದ ನಿನಗೇನು ಅನುಕೂಲವಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಉತ್ತರಕ್ಕೆ ಒಂದಷ್ಟು ನೆಟ್ಟಿಗರು ಗಹಗಹಿಸಿ ನಕ್ಕಿದ್ದಾರೆ. ಮತ್ತೆ ಕೆಲವರು, ಇಂಥ ಸಮಯದಲ್ಲಿ ಈ ಥರಹದ ಬೇಡಿಕೆ ಬೇಕಿತ್ತಾ ಎಂದು ಖಾರವಾಗಿಯೂ ಆತನಿಗೆ ಹೇಳಿದ್ದಾರೆ.
ಕಳೆದ ವರ್ಷವೂ ಲಾಕ್ಡೌನ್ ಸಮಯದಲ್ಲಿ ಈ ರೀತಿಯ ಸಾವಿರಾರು ಬೇಡಿಕೆಗಳು ಸೋನು ಸೂದ್ಗೆ ಆಗಮಿಸಿದ್ದವು. ಅವುಗಳಿಗೆ ಅಷ್ಟೇ ಹಾಸ್ಯಾಸ್ಪದವಾಗಿಯೇ ಉತ್ತರ ನೀಡಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದರು.