24 ವರ್ಷಗಳ ಹಿಂದಿನ ಫೋಟೋ ಈಗ ವೈರಲ್​ ಆಗ್ತಿದೆ ...

Akshay Kumar - Shahrukh Khan - Final
Published on

ಮುಂಬೈ: ಮಂಗಳವಾರ ಬೆಳಿಗ್ಗೆಯಿಂದ ಸೋಷಿಯಲ್​ ಮೀಡಿಯಾದಲ್ಲೊಂದು ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. 24 ವರ್ಷಗಳ ಹಿಂದೆ ತೆಗೆದ ಒಂದು ಭಾವಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಯಾಕೆ ಗೊತ್ತಾ? ಈ ಥ್ರೋಬ್ಯಾಕ್​ ಫೋಟೋದಲ್ಲಿ ಬಾಲಿವುಡ್​ನ ಇಬ್ಬರು ಸೂಪರ್​ಸ್ಟಾರ್​ಗಳಾದ ಶಾರೂಖ್​ ಖಾನ್​ ಹಾಗೂ ಅಕ್ಷಯ್​ ಕುಮಾರ್​ ಆಡುತ್ತಿದ್ದಾರೆ.

ಕ್ರಿಕೆಟ್​ ಆಡುವ ಸಂದರ್ಭದಲ್ಲಿ ತೆಗೆದ ಈ ಫೋಟೋದಲ್ಲಿ ಅಕ್ಷಯ್​ ಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದರೆ, ಶಾರೂಖ್​ ಖಾನ್​ ವಿಕೆಟ್​ ಕೀಪಿಂಗ್​ ಮಾಡುತ್ತಿದ್ದಾರೆ. ಈ ಅಪರೂಪವಾದ ಈ ಚಿತ್ರಪಟವನ್ನು ಶಾರೂಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಇಬ್ಬರ ಅಭಿಮಾನಿಗಳು ಹಂಚಿಕೊಂಡು, ಇದನ್ನು ಇನ್ನಷ್ಟು ವೈರಲ್​ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

ಮೊದಲೇ ಹೇಳಿದಂತೆ, ಈ ಫೋಟೋ ತೆಗೆದಿದ್ದು 24 ವರ್ಷಗಳ ಹಿಂದೆ. ಯಶ್​ ಚೋಪ್ರಾ ಅಭಿನಯದ 'ದಿಲ್​ ತೋ ಪಾಗಲ್​ ಹೇ' ಚಿತ್ರದದಲ್ಲಿ ಶಾರೂಖ್​ ಮತ್ತು ಅಕ್ಷಯ್​ ಕುಮಾರ್​ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಚಿತ್ರೀಕರಣ ಬಿಡುವಿನಲ್ಲಿ ಚಿತ್ರತಂಡದವರೆಲ್ಲ ಕ್ರಿಕೆಟ್​ ಆಡಿದ್ದು, ಈ ಸಂದರ್ಭದಲ್ಲಿ ತೆಗೆದ ಚಿತ್ರ ಇದಾಗಿದೆ.

ಶಾರೂಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್ ಜತೆಯಾಗಿ ನಟಿಸಿದ ಏಕೈಕ ಚಿತ್ರವೆಂದರೆ ಅದು 'ದಿಲ್​ ತೋ ಪಾಗಲ್​ ಹೇ'. ಆ ನಂತರ ಅವರಿಬ್ಬರೂ ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಕೆಲವು ವರ್ಷಗಳ ಹಿಂದೆ ಈ ಕುರಿತು ಮಾತನಾಡಿದ್ದ ಶಾರೂಖ್​, 'ನಾನು ಮತ್ತು ಅಕ್ಷಯ್​ ಕುಮಾರ್​ ಪುನಃ ಜತೆಯಾಗಿ ನಟಿಸುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಅಕ್ಷಯ್​ ಬೆಳಿಗ್ಗೆ ಏಳುವ ಹೊತ್ತಿಗೆ ನಾನು ಮಲಗಿರುತ್ತೇನೆ. ನಾನು ಮಲಗುವ ಹೊತ್ತಿಗೆ ಅಕ್ಷಯ್​ ಎದಿರುತ್ತಾರೆ. ಹಾಗಾಗಿ, ಇಬ್ಬರೂ ಒಟ್ಟಿಗೆ ನಟಿಸುವುದ ಕಷ್ಟ' ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net