ವಜ್ರದ ಪೇಟೆಗೆ ನಟಿ ಸೋನಾಕ್ಷಿ ಸಿನ್ಹಾ ನಾಯಕಿ!

Sonakshi
Published on

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಈಗಾಗಲೇ ‘ಗಂಗೂಬಾಯಿ ಕಥೈವಾಡಿ’ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಬಹುತೇಕ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಹೀಗಿರುವಾಗಲೇ ಮತ್ತೊಂದು ಚಿತ್ರದ ಬಗ್ಗೆ ಸಂಜಯ್ ಸುಳಿವು ನೀಡಿದ್ದಾರೆ. ಈ ಬಾರಿಯೂ ಅವರು ನಾಯಕಿ ಪ್ರಧಾನ ಚಿತ್ರಕ್ಕೆ ಕೈಹಾಕಿದ್ದು, ‘ಹೀರಾ ಮಂಡಿ’ ಹೆಸರಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಂತೆ.

ಸೋನಾಕ್ಷಿ, ‘ದಬಾಂಗ್ 3’ ಬಳಿಕ ಬೇರಾವ ಸಿನಿಮಾ ಬಿಡುಗಡೆ ಆಗಿಲ್ಲ. ಅಜಯ್ ದೇವಗನ್ ಜತೆಗೆ ‘ಭುಜ್; ದಿ ಪ್ರೖೆಡ್ ಆಫ್ ಇಂಡಿಯಾ’ ಸಿನಿಮಾದಲ್ಲಿ ನಟಿಸಿದ್ದರಾದರೂ, ಆ ಚಿತ್ರದ ಬಿಡುಗಡೆ ಯಾವಾಗ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಈ ನಡುವೆ ‘ಹೀರಾ ಮಂಡಿ’ಗೆ ನಾಯಕಿಯನ್ನಾಗಿ ಸೋನಾಕ್ಷಿಯನ್ನು ಆಯ್ದುಕೊಂಡಿದ್ದಾರೆ ಬನ್ಸಾಲಿ. ಈ ಚಿತ್ರದಲ್ಲಿ ಸೋನಾಕ್ಷಿಗೆ ನೆಗೆಟಿವ್ ಶೇಡ್ ಇರಲಿದೆಯಂತೆ. ಇನ್ನಷ್ಟೇ ಈ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net