ಹೇರ್​​ಸ್ಟೈಲ್​​​ನಿಂದ ಟ್ರೋಲ್​ಗೊಳಗಾದ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ: ಅಭಿಮಾನಿಗಳು ಮನವಿ ಮಾಡಿದ್ದು ಹೀಗೆ!

Sonakshi 1
Published on

ಮುಂಬೈ: ಬಾಲಿವುಡ್​ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಹೊಸ ಫೋಟೋವೊಂದನ್ನು ಶೇರ್​ ಮಾಡಿಕೊಂಡಿರುವ ಸೋನಾಕ್ಷಿ ಫೋಟೋಗೆ ಭಾರೀ ಟೀಕೆಗಳೇ ವ್ಯಕ್ತವಾಗುತ್ತಿದೆ.

ಸದ್ಯ ಹಂಚಿಕೊಂಡಿರುವ ಫೋಟೋ ವೈರಲ್​ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮ್ಮ ಹೇರ್​ ಸ್ಟೈಲ್​ ಕುರಿತು ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.ಆಗ್ಗಾಗ್ಗೆ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲು ಯತ್ನಿಸುವ ಸೋನಾಕ್ಷಿ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವ ಫ್ಯಾಷನ್​ ಆಯ್ದುಕೊಳ್ಳುವುದು ಸಾಮಾನ್ಯ. ಈ ಬಾರಿ ಸ್ವಲ್ಪ ಮಟ್ಟಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಳಿ ಬಣ್ಣದ ಹೇರ್​ಸ್ಟೈಲ್​ನಲ್ಲಿ ಕಾಣಿಸಿಕೊಂಡಿರುವ ಸೋನಾಕ್ಷಿ ಅವರ ಲುಕ್​ ಬಗ್ಗೆ ಪ್ರತಿಕ್ರಿಯಿಸಿಲು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಆದರೆ ಕೆಲವರಿಗೆ ಇದು ಇಷ್ಟವಾದರೆ, ಮತ್ತೆ ಕೆಲವರು ಮಾತ್ರ ಅಜ್ಜಿಯಂತೆ ಕಾಣುತ್ತಿದ್ದೀರಿ, ದಯವಿಟ್ಟು ನಿಮ್ಮ ಹೇರ್​ಸ್ಟೈಲ್ ಚೇಂಜ್​ ಮಾಡಿ ಎಂದು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net