More

    ಪಾಸ್​ಪೋರ್ಟ್ ಕ್ಯೂನಲ್ಲಿ ಇದ್ದ ವೇಳೆಯೇ ಕಾಣಿಸಿಕೊಂಡ ಹೆರಿಗೆ ನೋವು: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

    ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಿಂದ ತೊರೆಯಲು ನಿರ್ಧರಿಸಿರುವ ಅಲ್ಲಿನ ನಾಗರಿಕರು ಪಾಸ್​ಪೋರ್ಟ್​​ಗಾಗಿ ದಿನಗಟ್ಟಲೇ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

    ಬೇರೆ ದೇಶಕ್ಕೆ ತೆರಳು ಪಾಸ್​ಪೋರ್ಟ್​ಗಾಗಿ ಎರಡು ದಿನಗಳಿಂದ ಸರದಿ ಸಾಲಿನಲ್ಲಿ ನಿಂತಿದ್ದ ಗರ್ಭಿಣಿ ಮಹಿಳೆಯೊಬ್ಬಳು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.ಸಾಲಿನಲ್ಲಿ ನಿಂತಿದ್ದ ವೇಳೆಯೇ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನೋವಿನಿಂದ ಬಳಲುತ್ತಿದ್ದ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ನಂತರ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೆಂಟ್ರಲ್​ ಹಿಲ್ಸ್​ ಪ್ರದೇಶದ 26 ವರ್ಷದ ಮಹಿಳೆಯೊಬ್ಬರು ಬೇರೆ ದೇಶದಲ್ಲಿ ಉದ್ಯೋಗ ಪಡೆಯಲು ಪತಿ ಜತೆ ಪಾಸ್​ಪೋರ್ಟ್​ಗಾಗಿ ಎರಡು ದಿನಗಳಿಂದ ಸಾಲಿನಲ್ಲಿ ನಿಂತಿದ್ದರು. ಆದರೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

    ಕಳೆದ ಜನವರಿಯಿಂದ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಸಾವಿರಾರು ಜನರು ದೇಶ ತೊರೆಯಲು ಪಾಸ್​ಪೋರ್ಟ್​ ಪಡೆಯುವುದಕ್ಕಾಗಿ ಮುಗಿಬಿದ್ದಿದ್ದಾರೆ. ಪೆಟ್ರೋಲ್​ ಹಾಕಿಸಿಕೊಳ್ಳುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದ್ದು, ಈವರೆಗೆ 16 ಮಂದಿ ಸರದಿ ಸಾಲಿನಲ್ಲೇ ಮೃತಪಟ್ಟಿರುವುದು ವರದಿಯಾಗಿದೆ. (ಏಜೆನ್ಸೀಸ್​)

    ಹತ್ಯೆಯಾದ ಕನ್ಹಯ್ಯ ಲಾಲ್ ಮಕ್ಕಳಿಗೆ ಸರ್ಕಾರಿ ಉದ್ಯೋಗ: ಮುಖ್ಯಮಂತ್ರಿ ಗೆಹ್ಲೋಟ್​ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts