

ಬಾಲಿವುಡ್ ನಟ ರಿಷಿ ಕಪೂರ್ ಏಪ್ರಿಲ್ 30ಕ್ಕೆ ಇಹಲೋಹ ತ್ಯಜಿಸಿದ್ದರು. ಅವರ ಸಾವಿಗೆ ಇಡೀ ಸಿನಿಮಾ ಇಂಡಸ್ಟ್ರಿ ಕಂಬನಿ ಮಿಡಿದಿತ್ತು. ಚಿತ್ರರಂಗದ ಗಣ್ಯರು, ಅಭಿಮಾನಿಗಳು ನೆಚ್ಚಿನ ನಟನನ್ನು ಕಳೆದುಕೊಂಡಿದ್ದಕ್ಕೆ ದುಃಖದಲ್ಲಿ ಮುಳುಗಿದ್ದರು. ಇಡೀ ದೇಶವೇ ರೊಮ್ಯಾಂಟಿಕ್ ಹೀರೋನನ್ನು ನೆನೆಯುತ್ತಿದ್ದರೆ, ಇತ್ತ ರಿಷಿ ಕಪೂರ್ ಏಕೈಕ ಪುತ್ರ ರಣಬೀರ್ ಕಪೂರ್ ಮಾತ್ರ ಬೇರೆಯದೇ ಗುಂಗಿನಲ್ಲಿದ್ದಾರೆ. ಆ ಗುಂಗು ಏನೆಂಬುದು ಫೋಟೋ ಸಮೇತ ಹೊರಬಿದ್ದಿದೆ.
ಹೌದು, ಅಪ್ಪ ನಿಧನರಾಗಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ, ಹೀಗಿರುವಾಗಲೇ 3ಲಕ್ಷ ಮೌಲ್ಯದ ಶೂ ಧರಿಸಿ ಒಂದಷ್ಟು ಟೀಕೆಗೆ ಗುರಿಯಾಗಿದ್ದಾರೆ. ಆ ಶೂಗಳಿಂದ ನೆಟ್ಟಿಗರ ಕೆಂಗೆಣ್ಣಿಗೂ ಗುರಿಯಾಗಿದ್ದಾರೆ. ಬರೀ ಅದೊಂದೆ ಅಲ್ಲ, ನಟಿ ಆಲಿಯಾ ಭಟ್ ವಿಚಾರವಾಗಿಯೂ ರಣಬೀರ್ ಟ್ರೋಲ್ ಆಗುತ್ತಿದ್ದಾರೆ. ಅಪ್ಪ ನಿಧನರಾದರೂ, ಅವರ ಬಗ್ಗೆ ಮರುಕ ವ್ಯಕ್ತಪಡಿಸದೇ ಆಲಿಯಾ ಹಿಂದೆಯೇ ಸುತ್ತುತ್ತಿದ್ದಾರೆ ಎಂದು ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಈ ನಕಲಿ ಉಪೇಂದ್ರ ಯಾರು ಹೇಳಿ ನೋಡೋಣ …
ಇತ್ತೀಚೆಗಷ್ಟೇ ಹೇರ್ ಕಟ್ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಂಡಿದ್ದ ಆಲಿಯಾ, ಪ್ರೀತಿಪಾತ್ರರೊಬ್ಬರ ಸಲುವಾಗಿ ಕೂದಲಿಗೆ ಕತ್ತರಿ ಹಾಕಿದ್ದೇನೆ ಎಂದು ಬರೆದುಕೊಂಡಿದ್ದರು. ಆಗ ಸಹ ಕಮೆಂಟ್ ಬಾಕ್ಸ್ನಲ್ಲಿ ರಣಬೀರ್ ಹೆಸರೇ ಪ್ರಸ್ತಾಪವಾಗಿತ್ತು. ಹೀಗೆ ಒಂದಿಲ್ಲ ಒಂದು ಕಾರಣಕ್ಕೆ ಈ ಜೋಡಿ ಸದ್ದು ಮಾಡುತ್ತಿದ್ದರೆ, ಈ ಜೋಡಿಯ ಈ ತರಲೆ ಆಟಗಳಿಗೆ ಪರ ವಿರೋಧ ಕಮೆಂಟ್ಗಳೂ ಸಂದಾಯವಾಗುತ್ತಿವೆ. (ಏಜೆನ್ಸೀಸ್)