

ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿನ ಪ್ರದರ್ಶನ ರದ್ದಾದ ಬಳಿಕ ಓಟಿಟಿ ವೇದಿಕೆಯಲ್ಲಿ ಸಾಲು ಸಾಲು ಸಿನಿಮಾಗಳ ಬಿಡುಗಡೆ ಆಗುತ್ತಿವೆ. ಅದರಲ್ಲೂ ಓಟಿಟಿಯನ್ನೇ ಹೆಚ್ಚು ಅವಲಂಭಿಸಿರುವ ಪ್ರೇಕ್ಷಕ ವರ್ಗಕ್ಕೆ ಈ ವಾರ ನಾಲ್ಕೈದು ಸಿನಿಮಾಗಳು ಮನರಂಜನೆ ನೀಡಲು ಸಜ್ಜಾಗಿವೆ. ಹಾಗಾದರೆ ಯಾವೆಲ್ಲ ಸಿನಿಮಾ ಯಾವ ಓಟಿಟಿಯಲ್ಲಿ ಯಾವತ್ತು ಬಿಡುಗಡೆ ಆಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
1. ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯ್
ಮೊದಲಿಗೆ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ರಾಧೆ ಚಿತ್ರ ಮೇ 13ಕ್ಕೆ ಈದ್ ಹಬ್ಬದ ಪ್ರಯುಕ್ತ ಜೀ ಓಟಿಟಿಯಲ್ಲಿ ತೆರೆಕಾಣಲಿದೆ. ಈಗಾಗಲೇ ಸಾಕಷ್ಟು ಹೈಪ್ ಸೃಷ್ಟಿಸಿರುವ ಈ ಚಿತ್ರ ಓಟಿಟಿ ವೇದಿಕೆಯಲ್ಲಿಯೂ ಹೆಸ ದಾಖಲೆ ಬರೆಯಲು ತುದಿಗಾಲ ಮೇಲೆ ನಿಂತಿದೆ.
2. ಮಿನರಿ
ಮಿನರಿ ಇದೊಂದು ಕೋರಿಯನ್ ಸಿನಿಮಾ. ಲೀ ಇಸಾಕ್ ನಿರ್ದೇಶನದ ಈ ಸಿನಿಮಾ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಆಯ್ಕೆಯಾಗಿತ್ತು. ಇದೇ ಚಿತ್ರದ ಯೂನ್ ಜುಂಗ್ ಅತ್ಯುತ್ತಮ ಪೋಷಕ ನಟನ ಪಾತ್ರಕ್ಕೆ ಆಸ್ಕರ್ ದಕ್ಕಿಸಿಕೊಂಡಿದ್ದರು. ಅಂದಹಾಗೆ ಈ ಚಿತ್ರ ಇಂದಿನಿಂದ (ಮಂಗಳವಾರ) ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ.
3. ಸಿನಿಮಾ ಬಂಡಿ
ಬಾಲಿವುಡ್ನ ನಿರ್ದೇಶಕರಾದ ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಸಿನಿಮಾ ಬಂಡಿ. ತೆಲುಗಿನಲ್ಲಿ ತಯಾರಾಗಿರುವ ಈ ಚಿತ್ರ ಹಳ್ಳಿಗಾಡಿನ ಜೀವನವನ್ನು ತೆರೆದಿಡಲಿದೆ. ಹಾಸ್ಯ ಕಥಾನಕವುಳ್ಳ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಮೇ 14ರಿಂದ ಪ್ರದರ್ಶನ ಆರಂಭಿಸಲಿದೆ.
4. ಕರ್ಣನ್
ಕಾಲಿವುಡ್ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಧನುಷ್ ನಟನೆಯ ಕರ್ಣನ್ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಮೇ. 14ರಂದು ಚಿತ್ರ ಪ್ರದರ್ಶನ ಆರಂಭವಾಗಲಿದ್ದು, ಕಳೆದ ತಿಂಗಳು ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು.