

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗದಲ್ಲಿ ಭದ್ರಾವತಿ ಮೂಲದ ಧನುಷ್, ಇದೀಗ ನಾಯಕನಾಗಿ ಸ್ಯಾಂಡಲ್ವುಡ್ ಡೆಬ್ಯೂ ಮಾಡಿದ್ದಾರೆ. ಚಿತ್ರದ ಹೆಸರು "ರಾಯಲ್ ಮೆಕ್'. ಅದಕ್ಕೆ "ಲೈಫ್ ಅಂದ್ಕೊಂಡಷ್ಟು ರಾಯಲ್ ಅಲ್ಲ' ಎಂಬ ಅಡಿಬರಹವಿದೆ. ನಟಿ ರೇಖಾ ದಾಸ್ ಅವರ ಬಳಿ ಅಭಿನಯದ ತರಬೇತಿ ಪಡೆದು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಧನುಷ್ ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರಕ್ಕೆ ನಾಗಭೂಷಣ್ ಜೆ.ಎಚ್.ಎಂ ಮತ್ತು ಡಾ. ಜಯದೇವ ಹಾಸನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ರಿಲೀಸ್ ಮಾಡಲಾಯಿತು. ಮಾಜಿ ಸಚಿವ ರೇಣುಕಾಚಾರ್ಯ ಮತ್ತು ರೇಖಾ ದಾಸ್ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. "ಹಲವು ತೊಂದರೆಗಳನ್ನು ಎದುರಿಸುವ ಇಂಜಿನಿಯರ್ ಒಬ್ಬ ುಡ್ ಡೆಲಿವರಿ ಬಾಯ್ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ, ಏನಾದರೂ ಸಾಧಿಸುವ ಛಲದೊಂದಿಗೆ ಮುನ್ನಡೆಯುವ ಆತ, ಯಶಸ್ಸು ಗಳಿಸುತ್ತಾನಾ? ಎಂಬುದೇ ಚಿತ್ರದ ಕಥೆ' ಎಂದು ಮಾಹಿತಿ ನೀಡುತ್ತಾರೆ ಧನುಷ್.
ಧನುಷ್ಗೆ ಇಬ್ಬರು ನಾಯಕಿಯರಿದ್ದು ಶ್ರಾವ್ಯಾ ರಾವ್, ಗೌತಮಿ ಜಯರಾಂ ನಟಿಸಿದ್ದಾರೆ. ನಿರ್ದೇಶಕನ ಪಾತ್ರದಲ್ಲಿ ರಾವೇಂದ್ರ ರಾಜಕುಮಾರ್ ಸೇರಿ ರಮೇಶ್ ಭಟ್, ವಿನಯ ಪ್ರಸಾದ್, ನೀನಾಸಂ ಅಶ್ವತ್ಥ್, ಕುರಿ ಪ್ರತಾಪ್, ಪವನ್ ಕುಮಾರ್, ರೇಖಾದಾಸ್ ತಾರಾಗಣದಲ್ಲಿದ್ದಾರೆ. ಸೆಪ್ಟೆಂಬರ್ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.