ಸನ್ನಿ ಲಿಯೋನ್​ಗೆ ಕರೊನಾ ಕೊರಗು: ಇನ್​ಸ್ಟಾಗ್ರಾಂನಲ್ಲಿ ಅಳಲು ತೋಡಿಕೊಂಡ ಬಾಲಿವುಡ್ ನಟಿ

sunny-leone with Family 17 MAR 20
Published on

ಮುಂಬೈ: ಬಾಲಿವುಡ್ ನಟಿ, ಮಾಜಿ ಬ್ಲೂಫಿಲಂ ತಾರೆ ಸನ್ನಿ ಲಿಯೋನ್​ಗೆ ಈಗ ಕರೊನಾ ಕೊರಗು ಕಾಡಿದೆ. ಕರೊನಾ ವೈರಸ್ Covid19 ಸೋಂಕು ಎಲ್ಲೆಡೆ ವ್ಯಾಪಿಸಿದ್ದು, ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕೆಂಬುದು ವೇದ್ಯ ವಿಚಾರ. ಸರ್ಕಾರದ ಆದೇಶವೂ ಇರುವ ಕಾರಣ ಇದು ಅನಿವಾರ್ಯ. ಹೀಗಾಗಿ ತಮ್ಮ ಸಂಕಟ, ಅಳಲನ್ನು ಇನ್​ಸ್ಟಾಗ್ರಾಂನಲ್ಲಿ ತೋಡಿಕೊಂಡಿದ್ದಾರೆ ಸನ್ನಿ ಲಿಯೋನ್ !

ಇನ್​ಸ್ಟಾಗ್ರಾಮ್​ನಲ್ಲಿ ಕುಟುಂಬದ ಸದಸ್ಯರೊಂದಿಗಿರು ಫೋಟೊ ಅಪ್ಲೋಡ್ ಮಾಡಿರುವ ಸನ್ನಿ ಲಿಯೋನ್​, ಈ ರೀತಿ ಬದುಕಬೇಕಾದ ಸ್ಥಿತಿ ಬಂತಲ್ಲ ನನ್ನ ಮಕ್ಕಳಿಗೆ ಎಂದು ಕೊರಗಿದ್ದಾರೆ. ಫೋಟೊದಲ್ಲಿ ಪತಿ ಡೇನಿಯಲ್ ವೆಬರ್​, ಮೂವರು ಮಕ್ಕಳಾದ ನಿಶಾ, ನೌಹ್​, ಆಶರ್​ ಇದ್ದಾರೆ. ಕರೊನಾ ವೈರಸ್​ ಸೋಂಕು ವಿಪರೀತವಾಗಿರುವ ಕಾರಣ ಅವರೆಲ್ಲರೂ ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಹೊರಗೆ ನಿಂತಿರುವ ದೃಶ್ಯವಿರುವ ಫೋಟೊ ಅದಾಗಿದೆ.

ಈ ದಂಪತಿ ನಿಶಾಳನ್ನು ಮಹಾರಾಷ್ಟ್ರದ ಲಾತೂರ್​ನಿಂದ ದತ್ತುಪಡೆದರೆ, ನೌಹಾ ಮತ್ತು ಆಶರ್ ಎಂಬ ಅವಳಿ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. ಸನ್ನಿ ಲಿಯೋನ್ ತಮ್ಮ ಬದುಕಿನ ಬಗ್ಗೆ ಜೀವನ ಶೈಲಿಯ ಬಗ್ಗೆ ನಿಯತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡುತ್ತಿರುತ್ತಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net