

ಬೆಂಗಳೂರು: ನವೆಂಬರ್ ತಿಂಗಳು ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷವಾದ ತಿಂಗಳು ಎಂದರೆ ತಪ್ಪಿಲ್ಲ. ಇದೊಂದೇ ತಿಂಗಳು 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿರುವ ವಿಷಯ ಗೊತ್ತೇ ಇದೆ. ಅದರಲ್ಲಿ ಇದೊಂದೇ ವಾರ ಆರು ಕನ್ನಡ ಚಿತ್ರಗಳು ಮತ್ತು ಒಂದು ಡಬ್ಬಿಂಗ್ ಚಿತ್ರ ಬಿಡುಗಡೆಯಾಗುವುದಕ್ಕೆ ತಯಾರಿ ನಡೆಸಿದೆ. ಇದೆಲ್ಲದರ ಜತೆಗೆ ಒಂದು ಹಳೆಯ ಚಿತ್ರ ಸಹ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ವಿಶಾಲ ಕಾಶಿ; ಪುಣ್ಯಸ್ಥಳಕ್ಕೆ ಭೇಟಿ ನೀಡಿದ ತಮಿಳು ನಟ
ಅಂದಹಾಗೆ, ಈ ವಾರ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘನಾ ಶೆಟ್ಟಿ ಅಭಿನಯದ 'ದಿಲ್ ಪಸಂದ್', ಶ್ರೇಯಸ್ ಮಂಜು ಮತ್ತು ರಿಷಿಕಾ ನಾಣಯ್ಯ ಅಭಿನಯದ 'ರಾಣ', ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ಅಭಿನಯದ 'ಓ', ಹೊಸಬರ 'ಎಲ್ಲೋ ಗ್ಯಾಂಗ್', 'ಹುಬ್ಬಳ್ಳಿ ಡಾಬಾ' ಮತ್ತು 'ದಿ ಫಿಲಂಮೇಕರ್' ಎಂಬ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ನಾಲ್ಕೂ ಚಿತ್ರಗಳು ವಿಭಿನ್ನ ಜಾನರ್ಗಳಿಗೆ ಸೇರಿದೆ ಸಿನಿಮಾಗಳಾಗಿವೆ.
ಸಮಂತಾ ಅಭಿನಯದ 'ಯಶೋದ' ಎಂಬ ತೆಲುಗು ಚಿತ್ರವು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಬರೀ ಕನ್ನಡವಷ್ಟೇ ಅಲ್ಲ, ಈ ಚಿತ್ರವು ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಏಕಕಾಲಕ್ಕೆ ಬಡುಗಡೆಯಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರವಾಗಿದೆ.
ಇದಲ್ಲದೆ, ಈ ವಾರ ಡಾ. ರಾಜಕುಮಾರ್ ಅವರ ಸೂಪರ್ ಹಿಟ್ ಚಿತ್ರವಾದ 'ಭಾಗ್ಯವಂತರು' ಹೊಸ ತಂತ್ರಜ್ನಾನದೊಂದಿಗೆ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ವಿತರಕ ಮುನಿರಾಜು ಕಳೆದ ವರ್ಷವೇ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಸ್ವಲ್ಪ ತಡವಾಗಿ ಈ ವಾರ ಬಿಡುಗಡೆಯಾಗುತ್ತಿದೆ.