ಈ ವರ್ಷ ಸ್ಯಾಂಡಲ್​ವುಡ್​ ಹೀರೋಗಳ ಪೈಕಿ ಹೊಸ ದಾಖಲೆ ಬರೆದ ಧನಂಜಯ್​

Dhananjay Final
Published on

ಬೆಂಗಳೂರು: ಒಬ್ಬೊಬ್ಬ ಹೀರೋ ಪ್ರತಿ ವರ್ಷ ಎಂಟ್ಹತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಆ ಸಂಖ್ಯೆ ಬಹಳ ಕಡಿಮೆ ಆಗಿದೆ. ಕೆಲವು ಹೀರೋಗಳು ವರ್ಷಕ್ಕೆ ಎರಡು ಸಿನಿಮಾ ಮಾಡಿದರೆ, ಇನ್ನೂ ಕೆಲವರು ಎರಡು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗಲೇ, ಧನಂಜಯ್​ ಈ ವರ್ಷ ಹೊಸ ದಾಖಲೆ ಮಾಡಿದ್ದಾರೆ.

ಈ ವರ್ಷ 210 ಪ್ಲಸ್​ ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ಅತೀ ಹೆಚ್ಚು ಚಿತ್ರಗಳಲ್ಲಿ ಧನಂಜಯ್​ ನಟಿಸಿದ್ದಾರೆ ಎನ್ನುವುದು ವಿಶೇಷ. ಧನಂಜಯ್​ ಅಭಿನಯದ ಆರು ಚಿತ್ರಗಳು ಈ ವರ್ಷ ಬಿಡುಡೆಯಾಗಿದೆ. ಯೋಗಿ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾದರೆ, ಪುನೀತ್​ ರಾಜಕುಮಾರ್​, ದಿಗಂತ್​ ಮತ್ತು 'ಡಾರ್ಲಿಂಗ್​' ಕೃಷ್ಣ ಅಭಿನಯದ ತಲಾ ಮೂರು ಚಿತ್ರಳು ಈ ವರ್ಷ ಬಿಡುಗಡೆಯಾಗಿವೆ. ಶಿವರಾಜಕುಮಾರ್​, ಗಣೇಶ್, ರಿಷಭ್​ ಶೆಟ್ಟಿ​ ಮತ್ತು ಶರಣ್​ ಅವರ ತಲಾ ಎರಡು ಚಿತ್ರಗಳು ಹೊರಬಂದಿವೆ. ಈ ವರ್ಷ ಯಾವ್ಯಾವ ಪ್ರಮುಖ ನಟ ಎಷ್ಟೆಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬ ಪಟ್ಟಿ ಇಲ್ಲಿದೆ.

ಧನಂಜಯ್​ - 21 ಹವರ್ಸ್​, ಬೈರಾಗಿ, ಮಾನ್ಸೂನ್​ ರಾಗ, ಹೆಡ್​ ಬುಷ್​, ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ, ತೋತಾಪುರಿ

ಯೋಗಿ - ಒಂಬತ್ತನೇ ದಿಕ್ಕು, ಕಿರಿಕ್​ ಶಂಕರ್​, ಹೆಡ್​ ಬುಷ್​, ನಾನು ಅದು ಮತ್ತು ಸರೋಜ

ಪುನೀತ್ - ಜೇಮ್ಸ್​, ದಿ ಲಕ್ಕಿ ಮ್ಯಾನ್​, ಗಂಧದ ಗುಡಿ

ಕೃಷ್ಣ - ಲವ್​ ಮಾಕ್ಟೇಲ್​ 2, ಲೋಕಲ್​ ಟ್ರೈನ್​, ದಿಲ್​ ಪಸಂದ್, ದಿ ಲಕ್ಕಿ ಮ್ಯಾನ್​

ದಿಗಂತ್​ - ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಗಾಳಿಪಟ 2, ತಿಮ್ಮಯ್ಯ ಅಂಡ್​ ತಿಮ್ಮಯ್ಯ

ಶಿವರಾಜಕುಮಾರ್​ - ಬೈರಾಗಿ, ವೇದ

ಗಣೇಶ್​ - ಗಾಳಿಪಟ 2, ತ್ರಿಬ್ಬಲ್​ ರೈಡಿಂಗ್​

ಶರಣ್​ - ಅವತಾರ ಪುರುಷ, ಗುರು ಶಿಷ್ಯರು

ರಿಷಭ್​ ಶೆಟ್ಟಿ - ಹರಿಕಥೆ ಅಲ್ಲ ಗಿರಿಕಥೆ, ಕಾಂತಾರ

ಪೃಥ್ವಿ ಅಂಬರ್​ - ಬೈರಾಗಿ, ಶುಗರ್​ಲೆಸ್​

ಸತೀಶ್​ ನೀನಾಸಂ - ಪೆಟ್ರೋಮ್ಯಾಕ್ಸ್​, ಡಿಯರ್​ ವಿಕ್ರಂ (ಓಟಿಟಿ)

ಸುದೀಪ್​ - ವಿಕ್ರಾಂತ್​ ರೋಣ

ಉಪೇಂದ್ರ - ಹೋಂ ಮಿನಿಸ್ಟರ್​

ಯಶ್​ - ಕೆಜಿಎಫ್​ 2

ರಕ್ಷಿತ್​ ಶೆಟ್ಟಿ - 777 ಚಾರ್ಲಿ

ರವಿಚಂದ್ರನ್​ - ರವಿ ಬೋಪಣ್ಣ

ಜಗ್ಗೇಶ್​ - ತೋತಾಪುರಿ

ವಿನೋದ್​ ಪ್ರಭಾಕರ್​ - ವರದ

ಪ್ರಜ್ವಲ್​ ದೇವರಾಜ್​ - ಅಬ್ಬರ

ಅಜೇಯ್​ ರಾವ್​ - ಶೋಕಿವಾಲ, ದಿಲ್​ ಪಸಂದ್​ (ಅತಿಥಿ ಪಾತ್ರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net