ಗಾಯಕ ವಿಜಯ್​ ಪ್ರಕಾಶ್​ ಕಡೆಯಿಂದ ಸಿಎಂ ನಿಧಿಗೆ ತಲುಪಿದ್ದು ಇಷ್ಟು ಮೊತ್ತ..

Vijay-Prakash
Published on

ಬೆಂಗಳೂರು: ಕರೊನಾದಿಂದಾಗಿ ಇಡೀ ವಿಶ್ವವೇ ಈಗ ಸಮಸ್ಯೆಯಲ್ಲಿ ಸಿಲುಕಿದೆ. ಎಲ್ಲ ಕ್ಷೇತ್ರಗಳು ಕಾರ್ಯ ಚಟುವಟಿಕೆ ನಿಲ್ಲಿಸಿವೆ. ಲಾಕ್​ಡೌನ್​ ನೆಪದಲ್ಲಿ ಭಾರತೀಯರೆಲ್ಲರೂ ಮನೆಯಲ್ಲಿ ಕುಳಿತಿದ್ದಾರೆ. ಉಳ್ಳವರು ದೇಣಿಗೆ ನೀಡುತ್ತಿದ್ದಾರೆ. ಇಲ್ಲದವರ ನೆರವಿಗಾಗಿ ಧಾವಿಸುತ್ತಿದ್ದಾರೆ. ಆಹಾರ ಪೊಟ್ಟಣಗಳನ್ನು ಮಾಡಿಕೊಂಡು ಹಂಚಿಕೆ ಮಾಡುತ್ತಿದ್ದಾರೆ. ಅದೇ ರೀತಿ ಗಾಯಕ ವಿಜಯ್​ ಪ್ರಕಾಶ್​ ಸಹ ಇದೀಗ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​, ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ 50 ಲಕ್ಷ ವೊತ್ತದ ಚೆಕ್​ ವಿತರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net