

ಇತ್ತೀಚೆಗಷ್ಟೇ ಕರೊನಾ ಸೋಂಕಿನಿಂದ ಆಸ್ಪತ್ರೆ ಪಾಲಾಗಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಈಗ ಆಸ್ಪತ್ರೆಯಿಂದ ಗಂಟುಮೂಟೆ ಕಟ್ಟುತ್ತಿದ್ದಾರೆ. ಅಂದರೆ, ಐದು ಮತ್ತು ಆರನೇ ವರದಿಯಲ್ಲಿ ನೆಗೆಟಿವ್ ಅಂಶ ಕಂಡುಬಂದಿದ್ದು, ಸೋಮವಾರ ಲಖನೌದಲ್ಲಿನ ಸಂಜಯ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಮಾರ್ಚ್ 9ರಂದು ಲಂಡನ್‌ನಿಂದ ಹಿಂದಿರುಗಿದ್ದ ಕನ್ನಿಕಾ, ಮಾರ್ಚ್ 20ಕ್ಕೆ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕಿದ್ದರೂ ಪಾರ್ಟಿಗಳಿಗೆ ಹಾಜರಿ ಹಾಕಿದ್ದರು. ಹಾಗಾಗಿ ಅವರ ವಿರುದ್ಧ ಮೂರು ಎಫ್ಐಆರ್ಗಳು ದಾಖಲಾಗಿದ್ದವು. ಇದೀಗ ಗುಣಮುಖರಾಗಿ ಹೊರಬಂದಿದ್ದಾರೆ. ಲಾಕ್ಡೌನ್ ಮುಕ್ತಾಯವಾಗುತ್ತಿದ್ದಂತೆ, ಪ್ರಕರಣಗಳ ವಿಚಾರಣೆಗೆ ಕನ್ನಿಕಾ ಕೋರ್ಟು ಕಚೇರಿ ಅಲೆಯಬೇಕಿದೆ. (ಏಜೆನ್ಸೀಸ್)