

ಬೆಂಗಳೂರು: 'ಇನಾಮ್ದಾರ್' ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಚಿತ್ರದ ಮೊದಲ ಹಾಡಾದ 'ಸಿಲ್ಕು ಮಿಲ್ಕು', ಕೊಪ್ಪದಲ್ಲಿ ಬಿಡುಗಡೆಯಾಗಿದೆ.
'ಸಿಲ್ಕು ಮಿಲ್ಕು' ಒಂದು ಐಟಂ ಡ್ಯಾನ್ಸ್ ತರಹದ ಹಾಡಾಗಿದ್ದು, ಈ ಹಾಡಿನಲ್ಲಿ ರಂಜನ್ ಮತ್ತು ಎಸ್ತರ್ ನರೋನಾ ಹೆಜ್ಜೆ ಹಾಕಿದ್ದಾರೆ. ಹಾಡನ್ನು ಇಂದು ನಾಗರಾಜ್ ಮತ್ತು ರವೀಂದ್ರ ಸೊರಗಾಂವಿ ಹಾಡಿದ್ದು, ರಾಕೇಶ್ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ. ಕುಂತೂರು ಶ್ರೀಕಾಂತ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಸಿನಿಮಾ ಇದಾಗಿದ್ದು, 'ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆ' ಎಂದು ನಿರ್ದೇಶಕರು ಹೇಳುತ್ತಾರೆ.
ಕುಂತಿ ಅಮ್ಮ ಪ್ರೊಡಕ್ಷನ್ ಮೂಲಕ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿದ್ದು, ' ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಎರಡು ಜನಾಂಗ ಘರ್ಷಣೆಯನ್ನ ತೆರೆಯ ಮೇಲೆ ತರಲು ತರುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ನಿರ್ದೇಶಕರು ಹೊಸತನದ ಪ್ರಯತ್ನವನ್ನ ಮಾಡಿದ್ದಾರೆ' ಎನ್ನುತ್ತಾರೆ.
'ಇನಾಮ್ದಾರ್' ಚಿತ್ರದಲ್ಲಿ ರಂಜನ್ ಛತ್ರಪತಿ, ಚಿರಶ್ರೀ ಅಂಚನ್, ಎಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ ಮುಂತಾದವರು ಅಭಿನಯಿಸಿದ್ದು, ರಾಕೇಶ್ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ.