ಈ ಸಲದ ಹಿಂದಿ ಬಿಗ್​ಬಾಸ್​ಗೆ ಸಲ್ಮಾನ್​ ಜತೆ ಇನ್ನೊಬ್ಬ ನಿರೂಪಕ

big-boss
Published on

ಮುಂಬೈ: ಹಿಂದಿ ಬಿಗ್​ಬಾಸ್​ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್​ ಮೊದಲ ವಾರದಲ್ಲಿ ಸಲ್ಮಾನ್ ಖಾನ್​ ಮತ್ತೆ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್​ಡೌನ್​ ಅನ್ನೇ ಥೀಮ್ ಆಗಿಸಿಕೊಂಡಿರುವ ಈ ಸಲದ ಬಿಗ್​ಬಾಸ್ ಸೀಸನ್ 14, ಹೊಸ ಹೊಸ ನಿಮಯಮಗಳನ್ನು ಈ ಸಲದ ಶೋದಲ್ಲಿ ಅಳವವಡಿಸಿಕೊಂಡಿದೆ. ಸ್ಪರ್ಧಿಗೂ ಇದು ಹೊಸ ಅನುಭವದ ಜತೆಗೆ ನೋಡುಗರಿಗೂ ಮನರಂಜನೆಯ ಬಾಡೂಟವನ್ನೇ ಬಡಿಸಲಿದೆ.

ಇದೀಗ ಇದೇ ಬಿಗ್​ಬಾಸ್​ ಕುರಿತ ಇನ್ನೊಂದು ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಅದೇನೆಂದರೆ, ಈ ಸಲದ ಬಿಗ್​ಬಾಸ್​ ನಿರೂಪಣೆಯಲ್ಲಿ ಸಲ್ಮಾನ್​ ಜತೆಗೆ ಇನ್ನೋರ್ವ ನಿರೂಪಕನೂ ಕಾಣಿಸಿಕೊಳ್ಳಲಿದ್ದಾರಂತೆ! ಸೀಸನ್​ 13ರ ವಿನ್ನರ್​ ಸಿದ್ಧಾರ್ಥ ಶುಕ್ಲಾ ಸೀಸನ್​ 14ರ ನಿರೂಪಣೆಯಲ್ಲಿ ಸಲ್ಮಾನ್​ಗೆ ಸಾಥ್​ ನೀಡಲಿದ್ದಾರಂತೆ.

ಸೀಸನ್​ 13 ವಿನ್​ ಆದ ಬಳಿಕ ಸಾಕಷ್ಟು ಜನಪ್ರಿಯತೆ ಮತ್ತು ಅಪಾರ ಅಭಿಮಾನಿ ಬಳಗವನ್ನು ಸಿದ್ಧಾರ್ಥ್​ ಸಂಪಾದಿಸಿಕೊಂಡಿದ್ದಾರೆ. ಆ ಪಾಪ್ಯುಲಾರಿಟಿಯನ್ನೇ ಮತ್ತೊಮ್ಮೆ ಬಳಸಿಕೊಳ್ಳಲಿ ಬಿಗ್​ಬಾಸ್ ಮೇಕರ್ಸ್​ ವಿಚಾರ ಮಾಡಿದ್ದು, ಸ್ಪರ್ಧಿ ಬದಲು ವಿಶೇಷ ರೀತಿಯಲ್ಲಿ ಅವರೂ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net