

ಬೆಂಗಳೂರು: ಕಿರುತೆರೆಯಲ್ಲಿ ಸಕ್ರಿಯರಾಗಿ, ಆಗಾಗ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದ ಸಿದ್ದು ಮೂಲಿಮನಿ ಇದೀಗ ‘ಓಮಿನಿ’ ಚಿತ್ರದಲ್ಲಿ ನಾಯಕನಾಗಿದ್ದಾರೆ. ಮಂಜು ಹೆದ್ದೂರು ನಿರ್ದೇಶನದ ಈ ಸಿನಿಮಾ ಇತ್ತೀಚೆಗೆ ಹಾಡಿನ ಶೂಟಿಂಗ್ ಮೂಲಕ ಚಿತ್ರೀಕರಣ ಕೆಲಸಗಳನ್ನು ಮುಗಿಸಿಕೊಂಡಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬಿಜಿಯಾಗಿದೆ. ಶೀಘ್ರದಲ್ಲಿ ಹಾಡುಗಳನ್ನು ಹೊರತರುವುದು ತಂಡದ ಪ್ಲಾನ್.
ಈ ಸಿನಿಮಾಕ್ಕೆ ‘ಓಮಿನಿ’ ಶೀರ್ಷಿಕೆ ಇಡಲು ಕಾರಣವೊಂದಿದೆ. ಚಿತ್ರದಲ್ಲಿ ಕಥಾನಾಯಕನಷ್ಟೇ ಮಹತ್ವದ ಪಾತ್ರವನ್ನು ವ್ಯಾನ್ವೊಂದು ನಿಭಾಯಿಸಿದೆಯಂತೆ. ಹಾಗಾಗಿ ಅದನ್ನೇ ಶೀರ್ಷಿಕೆಯಾಗಿ ಆಯ್ದುಕೊಂಡಿದ್ದಾರೆ ನಿರ್ದೇಶಕರು. ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಿದ್ದುಗೆ ನಾಯಕಿಯಾಗಿ ಪೂಜಾ ಜನಾರ್ದನ್ ನಟಿಸಿದ್ದಾರೆ. ಬೆಳ್ಳುಡಿ ಫಿಲಂಸ್ ಚಿತ್ರ ನಿರ್ವಿುಸಿದೆ. ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ಅರ್ಜುನ್ ರಾಮು ಸಂಗೀತ ನೀಡಿದರೆ, ಎಂ.ಬಿ ಅರಳಿಕಟ್ಟಿ ಛಾಯಾಗ್ರಹಣ ಮಾಡಿದ್ದಾರೆ.