ಇನ್ನು, ಸಿನಿಮಾ ರಿಲೀಸ್ ಆಗುವ ಮುನ್ನವೇ ಗಣ್ಯರಿಗಾಗಿ ಫೆಬ್ರವರಿ.23 ರಂದು ಚಿತ್ರತಂಡ ಒಂದು ಪ್ರೀಮಿಯರ್ ಶೋ ನಡೆಸಿತು. ನಿರ್ದೇಶಕ ಪ್ರೇಮ್, ರಕ್ಷಿತಾ ಇಬ್ಬರೂ ರಾಜಕೀಯ ಮುಖಂಡರಿಗೆ, ಚಿತ್ರರಂಗದ ಗಣ್ಯರಿಗೆ ಸಿನಿಮಾದ ಪ್ರೀಮಿಯರ್ ಶೋಗೆ ಆಹ್ವಾನ ನೀಡಿದ್ದರು. ವಿಶೇಷ ಅಂದರೆ, ಪ್ರೇಮ್ ಅವರು ನೀಡಿದ ಆಹ್ವಾನದ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು 'ಏಕ್ ಲವ್ ಯಾ' ಸಿನಿಮಾವನ್ನು ವೀಕ್ಷಿಸಿದ್ದಾರೆ.