ಶ್ವೇತಾ ಪ್ಯಾರಲಲ್​ ಲೈಫ್​ ; ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ಬಿಜಿಯಾದ "ಹೆಜ್ಜಾರು' ಹುಡುಗಿ

3-10
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಖಾಸಗಿ ಪುಟಗಳು' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ ಶ್ವೇತಾ ಲಿಯೋನೆಲ್ಲಾ ಡಿಸೋಜಾ, ಆ ಬಳಿಕ ಹಿಂದಿ ಸಿನಿಮಾ "ದಿ ವೈ'ನಲ್ಲೂ ಮಿಂಚಿದ್ದರು. ಸದ್ಯ ಹರ್ಷಪ್ರಿಯ ನಿರ್ದೇಶನದ ಕನ್ನಡದ ಮೊದಲ ಪ್ಯಾರಲಲ್​ ಲೈಫ್​ ಸಿನಿಮಾ ಎಂಬ ಹೆಗ್ಗಳಿಕೆಯ "ಹೆಜ್ಜಾರು' ಚಿತ್ರದ ರಿಲೀಸ್​ಗೆ ಶ್ವೇತಾ ಎದುರು ನೋಡುತ್ತಿದ್ದಾರೆ. ಇದಲ್ಲದೇ "ಮಾದೇವ', "ಗಾಂಧಿ ಸ್ಕ್ವೇರ್​' ಸೇರಿ ಇನ್ನೂ ಎರಡು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದು, ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.

ರಿಯಲಿಸ್ಟಿಕ್​ ಜಾನಕಿ
ಕಾಲೇಜು ದಿನಗಳಲ್ಲೇ ಕಿರುಚಿತ್ರಗಳಲ್ಲಿ ನಟಿಸುತ್ತಿದ್ದ ಶ್ವೇತಾಗೆ, ಅಲ್ಲಿ ಸಿಕ್ಕ ಒಳ್ಳೆಯ ಪ್ರತಿಕ್ರಿಯೆಗಳೇ ಸಿನಿಮಾಗೆ ಬರಲು ಸ್ಪೂರ್ತಿಯಂತೆ. "ಕ್ರಮೇಣ ನಟ, ನಿರ್ದೇಶಕ ರಾಜ್​ ಬಿ. ಶೆಟ್ಟಿ ಅವರ ಪರಿಚಯವಾಗಿ, ಅವರ ಮಾರ್ಗದರ್ಶನ ಪಡೆದೆ, ಆ್ಯಕ್ಟಿಂಗ್​ ವರ್ಕ್​ಶಾಪ್​ ಕೂಡ ಮಾಡಿದೆ. ಆ ಮೂಲಕ ಆಡಿಷನ್ಸ್​ ಕೊಡತೊಡಗಿದೆ. ಕ್ರಮೇಣ ಸಿನಿಮಾಗಳಿಗೆ ಎಂಟ್ರಿ ಕೊಟ್ಟೆ' ಎಂದು ಹೇಳಿಕೊಳ್ಳುತ್ತಾರೆ. "ಹೆಜ್ಜಾರು' ಚಿತ್ರದಲ್ಲಿ ಭಗತ್​ ಆಳ್ವಾ ಚಿತ್ರದ ನಾಯಕನಾಗಿದ್ದು, ಅವರಿಗೆ ಶ್ವೇತಾ ಜೋಡಿಯಾಗಿದ್ದಾರೆ. ಪಾತ್ರದ ಬಗ್ಗೆ ಅವರು, "ನಿರ್ದೇಶಕ ಹರ್ಷಪ್ರಿಯ ಕರೆ ಮಾಡಿ ಕಥೆ ಹೇಳಿದರು. ನನಗೆ ಕಥೆ ಇಷ್ಟವಾಯಿತು. ನಾನಿಲ್ಲಿ ಜಾನಕಿ ಎಂಬ ಮಧ್ಯಮವರ್ಗದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇವೆ. ಬಹಳ ಲೈವ್ಲಿ ಮತ್ತು ರಿಯಲಿಸ್ಟಿಕ್​ ಆಗಿರುವ, ಪ್ರಾಮುಖ್ಯವಿರುವ ಎಲ್ಲರನ್ನೂ ಕಾಡುವ ಪಾತ್ರ' ಎಂದು ಮಾಹಿತಿ ನೀಡುತ್ತಾರೆ. ಭಗತ್​, ಶ್ವೇತಾ ಜತೆ ನವೀನ್​ ಕೃಷ್ಣ, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಅರುಣ ಬಾಲರಾಜ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.

ಸವಾಲಿನ ಸಿನಿಮಾ
ಕನ್ನಡದ ಮೊದಲ ಪ್ಯಾರಲಲ್ ಲೈಫ್​​ ಸಿನಿಮಾ ಆದ ಕಾರಣ ಚಿತ್ರಕಥೆ ಮತ್ತು ತಾಂತ್ರಿಕತೆ ಎರಡು ವಿಷಯಗಳಲ್ಲೂ ಹೆಚ್ಚು ಗಮನ ಹರಿಸಲಾಗಿದೆ. "ಎರಡು ಪಾತ್ರಗಳು ಬೇರೆ ಕಾಲಟ್ಟದಲ್ಲಿದ್ದರೂ ಒಂದೇ ರೀತಿಯ ಟನೆಗಳನ್ನು ಅನುಭವಿಸುತ್ತಾರೆ. ಅದನ್ನು ಸಿನಿಮಾ ರೀತಿ ಕಟ್ಟಿಕೊಡುವುದು ಕಷ್ಟಸಾಧ್ಯ. ಇನ್ನು ನನ್ನದು ರಿಯಲಿಸ್ಟಿಕ್​ ಪಾತ್ರವಾದ ಕಾರಣ ಡೈಲಾಗ್​ಗಳನ್ನು ಕಲಿತು, ಸೀನ್​ಗಳನ್ನು ಊಹಿಸಿಕೊಂಡು, ಅನುಭವಿಸಿ ನಟಿಸಿದೆ. ಯಾವ ಸೀನ್​ಅನ್ನೂ ನಾನು ಹಗುರವಾಗಿ ತೆಗೆದುಕೊಳ್ಳಲಿಲ್ಲ. ಭಯದಿಂದಲೇ ಮಾಡುತ್ತಿದ್ದೆ' ಎಂದು ಅನುಭವ ಹಂಚಿಕೊಳ್ಳುತ್ತಾರೆ ಶ್ವೇತಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net