

ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮೃತಪಟ್ಟು ನಾಲ್ಕು ತಿಂಗಳು ಕಳೆಯಿತು. ಅವರದ್ದು ಆತ್ಮಹತ್ಯೆಯೋ..ಕೊಲೆಯೋ ಎಂಬ ಸ್ಪಷ್ಟ ನಿರ್ಧಾರಕ್ಕೇ ಇನ್ನೂ ಬರಲಾಗಲಿಲ್ಲ.
ಸುಶಾಂತ್ ಕುಟುಂಬದವರು ತಮ್ಮ ಮನೆಯ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಾಮಾಜಿಕ ಜಾಲತಾಣಗಳ ಮೂಲಕ ನ್ಯಾಯಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ. ಇದನ್ನೂ ಓದಿ:‘ ನನ್ನ ಗಂಡನ ಹೆಸರು ತುಂಬ ಉದ್ದ…ನನ್ನ ಬೆರಳು ಸಣ್ಣ…’: ಅಲವತ್ತುಕೊಂಡ ಕಿರುತೆರೆ ನಟಿ
ಇಂದು ಅಕ್ಟೋಬರ್ 14. ಸುಶಾಂತ್ ಸಿಂಗ್ ಸಾವನ್ನಪ್ಪಿ 4 ತಿಂಗಳಾಯಿತು. ಹೀಗಿರುವಾಗ ಇಂದು ಸುಶಾಂತ್ ಸಹೋದರಿ ಶ್ವೇತಾ ಅವರು, ತಮ್ಮ ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ. ಶ್ವೇತಾ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಡಿಲೀಟ್ ಮಾಡಲು ಕಾರಣ ಏನು ಎಂಬುದನ್ನು ಕುಟುಂಬದವರು ಸ್ಪಷ್ಟಪಡಿಸಿಲ್ಲ.
ಕಳೆದ ರಾತ್ರಿಯಷ್ಟೇ ಶ್ವೇತಾ ತಮ್ಮ ಸೋದರ ಸುಶಾಂತ್ ಅವರ ಸ್ಫೂರ್ತಿದಾಯಕ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಶೇರ್ ಮಾಡಿ, ಸುಶಾಂತ್ ಸಿಂಗ್ರನ್ನು ನೆನಪಿಸಿಕೊಂಡಿದ್ದರು. ಆ ವಿಡಿಯೋದಲ್ಲಿ ನಟ ಸೈಕ್ಲಿಂಗ್, ಜಾಗಿಂಗ್ ಮಾಡುವುದನ್ನು ನೋಡಬಹುದು. ಇದನ್ನೂ ಓದಿ: ಹೆತ್ತವರ ಕಣ್ಣೆದುರಲ್ಲೇ 22 ವರ್ಷದ ಅಣ್ಣನನ್ನು ಭೀಕರವಾಗಿ ಕೊಂದೇ ಬಿಟ್ಟ ತಮ್ಮ!
ಸದ್ಯ ಸಿಬಿಐ ಸುಶಾಂತ್ ಸಾವಿನ ತನಿಖೆ ನಡೆಸುತ್ತಿದ್ದು, ಏಮ್ಸ್ ವೈದ್ಯರ ತಂಡ ಇದೊಂದು ಆತ್ಮಹತ್ಯೆ ಎಂಬ ವರದಿಯನ್ನೂ ನೀಡಿದೆ. ಆದರೂ ಕುಟುಂಬದ ವಕೀಲರು ಸೇರಿ ಇನ್ನೂ ಕೆಲವರು ಇದು ಖಂಡಿತ ಆತ್ಮಹತ್ಯೆಯಲ್ಲ. ಕೊಲೆ ಎಂದೇ ಪ್ರತಿಪಾದಿಸುತ್ತಿದ್ದಾರೆ. (ಏಜೆನ್ಸೀಸ್)