'ನನ್ನ ಗಂಡನ ಹೆಸರು ತುಂಬ ಉದ್ದ...ನನ್ನ ಬೆರಳು ಸಣ್ಣ...': ಅಲವತ್ತುಕೊಂಡ ಕಿರುತೆರೆ ನಟಿ

Taylore
Published on

ಹಿಂದಿ ಕಿರುತೆರೆ ನಟಿ ನಿತಿ ಟೇಲರ್​ ಇತ್ತೀಚೆಗಷ್ಟೇ ಪರೀಕ್ಷಿತ್​ ಬಾವಾ ಅವರೊಂದಿಗೆ ವಿವಾಹವಾಗಿದ್ದಾರೆ. ಆಗಸ್ಟ್​ 13ರಂದು ಮದುವೆಯಾಗಿದ್ದು, ನಿನ್ನೆ ಅಂದರೆ ಅಕ್ಟೋಬರ್​ 13ಕ್ಕೆ ಎರಡು ತಿಂಗಳಾಯಿತು.

ನಿತಿ ತಮ್ಮ ವೈವಾಹಿಕ ಜೀವನ ಎರಡು ತಿಂಗಳು ಪೂರೈಸಿದ ಖುಷಿಗೆ ಪತಿ ಪರೀಕ್ಷಿತ್​ಗೆ ಒಂದು ಅಚ್ಚರಿಯ ಗಿಫ್ಟ್​ ನೀಡಿದ್ದಾರೆ. ತಮ್ಮ ಉಂಗುರದ ಬೆರಳಿನ ಮೇಲೆ ಪತಿ ಪರೀಕ್ಷಿತ್​ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರುವ ನಟಿ, ತಮ್ಮ ಪ್ರೀತಿಯ ಪತಿಗೆ ಉಡುಗೋರೆ ಕೊಟ್ಟಿದ್ದಾರೆ. ಹಾಗೇ ತಮ್ಮ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

ನಾನು ಯಾವಾಗ ಮದುವೆಯಾಗುತ್ತೇನೋ ಆಗ ನನ್ನ ಪತಿಯ ಹೆಸರನ್ನು ಉಂಗುರದ ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು ಎಂಬುದು ನನ್ನ ಬಹುದಿನದ ಕನಸು. ಇದೀಗ ನಾನು ನನ್ನ ಕನಸನ್ನು ಈಡೇರಿಸಿಕೊಂಡಿದ್ದೇನೆ. ಆದರೆ ನನ್ನ ಗಂಡನದ್ದು ಉದ್ದನೆಯ ಹೆಸರು..ನನ್ನದು ಸಣ್ಣ ಬೆರಳು. ಆದರೂ ಹೇಗೋ ನಿಭಾಯಿಸಿದೆ. ಪೂರ್ತಿ ಹೆಸರು ಟ್ಯಾಟೂ ಹಾಕಿಸಿಕೊಂಡೆ ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net