ಕೊಟ್ಟ ಮಾತಂತೆ ನಡೆದ ಶುಭಾ; ಬಡವರಿಗೆ ಆಹಾರ ಧಾನ್ಯ ಹಂಚಿಕೆ

Shubha ready
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್ 8ಕ್ಕೆ ಅನಿರೀಕ್ಷಿತ ಬ್ರೇಕ್ ಬಿದ್ದಿದೆ. ಕೋವಿಡ್ ಹಿನ್ನೆಲೆಯಲ್ಲಿ ಬಿಗ್ ಮನೆ ಮಂದಿ ತಮ್ಮ ತಮ್ಮ ಮನೆ ಸೇರಿದ್ದಾರೆ. ಈ ನಡುವೆ ನಾವೆಲ್ಲ ಕರೊನಾ ವಾರಿಯರ್ಸ್​ ಆಗಿ ಕೆಲಸ ಮಾಡಲಿದ್ದೇವೆ. ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲಿದ್ದೇವೆ ಎಂದಿದ್ದರು. ಅದರಂತೆ ನಟಿ ಶುಭಾ ಪೂಂಜಾ ಇದೀಗ ಅದುಕೊಂಡಿದ್ದನ್ನು ಮಾಡಿ ತೋರಿಸಿದ್ದಾರೆ. ರಸ್ತೆಗಿಳಿದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಿದ್ದಾರೆ.

ಈಗಾಗಲೇ ಸ್ಯಾಂಡಲ್​ವುಡ್​ನ ಸಾಕಷ್ಟು ಕಲಾವಿದರು ರಸ್ತೆಗಿಳಿದು ತರಕಾರಿ, ದವಸ ಧಾನ್ಯ ಹಂಚಿಕೆ ಮಾಡುತ್ತಿದ್ದಾರೆ. ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಒಂದು ಹೆಜ್ಜೆ ಮುಂದೆ ಹೋಗಿ ಆಕ್ಸಿಜನ್ ಬಸ್ ಸೇವೆ ಆರಂಭಿಸಿದ್ದಾರೆ. ಇತ್ತ ರಾಗಿಣಿ ಮತ್ತು ಸಂಜನಾ ಗಲ್ರಾನಿ ಸಹ ಆಹಾರ ವಿತರಣೆ ಮಾಡುತ್ತಿದ್ದಾರೆ. ಇದೀಗ ಬಿಗ್​ಬಾಸ್ ಮನೆಯಿಂದ ಬಂದ ಶುಭಾ ನೇರವಾಗಿ ರೇಷನ್ ಖರೀದಿಸಿ ಬಡವರಿಗೆ ಹಂಚಿಕೆ ಮಾಡಿದ್ದಾರೆ. ಆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಂದಹಾಗೆ, 72 ದಿನಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಶುಭಾ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು. ಮಗುವಿನ ಮುಗ್ಧತೆ ರೀತಿಯಿಂದಲೇ ಎಲ್ಲರನ್ನು ಸೆಳೆದಿದ್ದರು. ಬಿಗ್​ಬಾಸ್​ ದಿಢೀರ್ ಸ್ಥಗಿತವಾಗುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೈಲಾದ ಸೇವೆ ಮಾಡುವ ಬಗ್ಗೆ ಎಲ್ಲ ಸ್ಪರ್ಧಿಗಳು ಹೇಳಿಕೊಂಡಿದ್ದರು. ಇದೀಗ ಹೇಳಿದ ಮಾತಿನಂತೆ ಶುಭಾ ತಮ್ಮ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net