More

    ತಮಿಳುನಾಡಿನ ಸೊಸೆಯಾಗುವಾಸೆ: ‘ಕಿರಿಕ್..’ ಹುಡುಗಿ ರಶ್ಮಿಕಾ ಮಂದಣ್ಣ

    ಬೆಂಗಳೂರು: ಕಳೆದ ತಿಂಗಳಷ್ಟೇ ರಶ್ಮಿಕಾ ಅಭಿನಯದ ತಮಿಳು ಚಿತ್ರ ‘ಸುಲ್ತಾನ್’ ಬಿಡುಗಡೆಯಾಗಿತ್ತು. ಇದೀಗ ಆ ಚಿತ್ರ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದಂತಿದೆ. ಅದಕ್ಕೆ ಕಾರಣ, ಅವರ ಇತ್ತೀಚಿನ ಮಾತುಗಳು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ, ತಮಗೆ ತಮಿಳುನಾಡಿನ ಸೊಸೆಯಾಗುವಾಸೆ ಎಂದು ಹೇಳಿಕೊಂಡಿದ್ದಾರೆ. ‘ನಾನು ‘ಸುಲ್ತಾನ್’ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ತಮಿಳುನಾಡಿನ ಸಂಸ್ಕೃತಿಯನ್ನು ಬಹಳ ಹತ್ತಿರದಿಂದ ನೋಡಿ ಆಕರ್ಷಿತಳಾದೆ. ಅದರಲ್ಲೂ ಅಲ್ಲಿಯ ಆಹಾರ ಮತ್ತು ಸಂಪ್ರದಾಯ ನನಗೆ ಬಹಳ ಇಷ್ಟವಾಯಿತು. ಮುಂದಿನ ದಿನಗಳಲ್ಲಿ ತಮಿಳುನಾಡಿನವರನ್ನು ಮದುವೆಯಾಗಿ, ಆ ರಾಜ್ಯದ ಸೊಸೆಯಾದರೂ ಆಗಬಹುದು’ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

    ರಶ್ಮಿಕಾ ಸದ್ಯ ಬಹುಬೇಡಿಕೆಯ ನಟಿಯಾಗಿದ್ದು, ತೆಲುಗಿನ ಎರಡು, ತಮಿಳಿನ ಒಂದು ಮತ್ತು ಹಿಂದಿಯ ಮೂರು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಪೈಕಿ, ಈಗಾಗಲೇ ಕೆಲವು ಚಿತ್ರಗಳ ಚಿತ್ರೀಕರಣ ಸಹ ಪ್ರಾರಂಭವೂ ಆಗಿದೆ. ಏಪ್ರಿಲ್ ತಿಂಗಳ ಕೊನೆಯವರೆಗೂ ಮುಂಬೈನಲ್ಲಿ ಹಿಂದಿ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ರಶ್ಮಿಕಾ, ಅಲ್ಲಿ ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆಯೇ, ಹೈದರಾಬಾದ್​ಗೆ ವಾಪಸ್ಸಾಗಿ ಅಲ್ಲಿಯೇ ಇದ್ದಾರೆ.

    ಅಯೋಧ್ಯೆಯ ಬ್ರಹ್ಮರಥ ನಿರ್ಮಾಣಕ್ಕೆ ಇಂದು ಕುಂದಾಪುರದ ಕುಂಭಾಶಿಯಲ್ಲಿ ಚಾಲನೆ: ಶ್ರೀರಾಮನಿಗಾಗಿ ವಿಶ್ವದ ಅತಿ ಎತ್ತರದ ರಥ

    ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts