ಹೆಡ್​ ಬುಷ್​ಗೆ ಶ್ರುತಿ ಹರಿಹರನ್- ವಸಿಷ್ಠಸಿಂಹ

Shruthi
Published on

ಬೆಂಗಳೂರು: ಧನಂಜಯ್ ನಾಯಕನಾಗಿ ನಟಿಸುತ್ತಿರುವ ‘ಹೆಡ್ ಬುಷ್’ ಚಿತ್ರಕ್ಕೆ ಒಬ್ಬರಾದ ಮೇಲೋಬ್ಬರು ಸೇರ್ಪಡೆಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಯೋಗಿ ತಂಡ ಸೇರಿಕೊಂಡಿದ್ದರು. ಇದೀಗ ವಸಿಷ್ಠ ಸಿಂಹ ಮತ್ತು ಶ್ರುತಿ ಹರಿಹರನ್ ಚಿತ್ರದ ಭಾಗವಾಗಿದ್ದಾರೆ. ತಾಯಿಯಾದ ಬಳಿಕ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಶ್ರುತಿ ಇದೀಗ ಮತ್ತೆ ಎಂಟ್ರಿಕೊಡುತ್ತಿದ್ದಾರೆ. ಅವರ ಪಾತ್ರವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಅಗ್ನಿಶ್ರೀಧರ್ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್​ನಲ್ಲಿಯೂ ಸಿನಿಮಾ ಸಿದ್ಧವಾಗಲಿದೆ. ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net