

ಬೆಂಗಳೂರು: ‘ಪಡ್ಡೆಹುಲಿ’ ಸಿನಿಮಾ ಮೂಲಕ ಚಂದನವನದಲ್ಲಿ ಖಾತೆ ತೆರೆದ ನಿರ್ವಪಕ ಕೆ ಮಂಜು ಪುತ್ರ ಶ್ರೇಯಸ್, ಇದೀಗ ಸಾಲುಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ 2021ರಲ್ಲಿ ಬರೋಬ್ಬರಿ ಮೂರರಿಂದ ನಾಲ್ಕು ಚಿತ್ರಗಳಲ್ಲಿ ಶ್ರೇಯಸ್ ನಟಿಸಲಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿಯೂ ಖಾತೆ ತೆರೆಯಲಿದ್ದಾರೆ.
ಸದ್ಯ ಶ್ರೇಯಸ್ ನಟನೆಯ ‘ವಿಷ್ಣು ಪ್ರಿಯಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತ ಜನವರಿ ಅಂತ್ಯಕ್ಕೆ ತಮಿಳು ಮತ್ತು ಮಲಯಾಳಂ ನಿರ್ವಪಕ ರವಿಕುಮಾರ್ ನಿರ್ವಣದ ಸಿನಿಮಾದಲ್ಲಿ ಶ್ರೇಯಸ್ ನಟಿಸಲಿದ್ದಾರೆ. ಅದಾದ ಬಳಿಕ ಸ್ವತಃ ಕೆ. ಮಂಜು ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಮಗನಿಗಾಗಿ ಬಹುಕೋಟಿ ವೆಚ್ಚದ ಸಿನಿಮಾ ನಿರ್ವಿುಸಲಿದ್ದಾರೆ. ನಾಲ್ಕು ಭಾಷೆಗಳಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ಮಾರ್ಚ್ ವೇಳೆಗೆ ಸೆಟ್ಟೇರಲಿದೆ. ಆ ನಂತರ ಮಲಯಾಳಂ ನಿರ್ವಪಕರ ಹೊಸ ಚಿತ್ರದಲ್ಲಿ ಶ್ರೇಯಸ್ ನಟಿಸಲಿದ್ದಾರೆ. ಅಂಡರ್ವರ್ಲ್ಡ್ ಕಥಾಹಂದರವುಳ್ಳ ಈ ಸಿನಿಮಾದ ಬಹುಪಾಲು ಶೂಟಿಂಗ್ ಮಂಗಳೂರು ಸುತ್ತಮುತ್ತ ನಡೆಯಲಿದೆಯಂತೆ.