

ಚೆನ್ನೈ: ಸೋಷಿಯಲ್ ಮೀಡಿಯಾದಲ್ಲಿ ಅಭಿನಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸಿನಿಮಾ ನಟ-ನಟಿಯರು ಆಗಾಗ ತಮ್ಮ ಕಪಾಟಿನಲ್ಲಿರುವ ಭದ್ರವಾಗಿಟ್ಟಿರುವ ಹಳೆಯ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ಒಂದು ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದರು. ರಿಷಿ ಕಪೂರ್ ಅವರ ಮದುವೆಯಲ್ಲಿ ತೆಗೆದು ಈ ಫೋಟೋ ಭಾರೀ ವೈರಲ್ ಆಗಿತ್ತು.
ಇದೀಗ ಮತ್ತೊಬ್ಬ ನಟಿಯ ಬಾಲ್ಯದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಆ ನಟಿ ರಜನಿಕಾಂತ್, ವಿಕ್ರಮ್, ವಿಜಯ್ ಸೇರಿದಂತೆ ಕಾಲಿವುಡ್ನ ಹಲವು ಜನಪ್ರಿಯ ಹೀರೋಗಳ ಜತೆಗೆ ನಾಯಕಿಯಾಗಿ ನಟಿಸಿದ್ದಾರೆ. ಈ ನಟಿ ಬೇರ್ಯಾರೂ ಅಲ್ಲ, ಶ್ರೇಯಾ ಶರಣ್.
ಶ್ರೇಯಾ ಶರಣ್ ಒಂದು ಕಾಲದಲ್ಲಿ ಕಾಲಿವುಡ್ನ ಜನಪ್ರಿಯ ಮತ್ತು ಬೇಡಿಕೆಯ ನಟಿಯಾಗಿದ್ದರು. ತಮಿಳಿನ ಜನಪ್ರಿಯ ಹೀರೋಗಳ ಜತೆಗೆ ಅವರು ತೆರೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ, ಕನ್ನಡದಲ್ಲೂ 'ಚಂದ್ರ' ಚಿತ್ರದಲ್ಲಿ ಅವರು ನಟಿಸಿದ್ದರು. ಈಗ ಅವರ ಬಾಲ್ಯದ ಫೋಟೋವಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೇಯಾ ಶರಣ್ ಮೂರು ವರ್ಷಗಳ ಹಿಂದೆ ತಮ್ಮ ಬಾಯ್ಫ್ರೆಂಡ್, ರಷ್ಯಾ ಮೂಲದ ಆಂಡ್ರೇ ಕೋಶ್ಚೀವ್ ಅವರನ್ನು ಮದುವೆಯಾಗಿ ಮುಂಬೈನಲ್ಲಿ ನೆಲೆಸಿದ್ದಾರೆ.