

ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಹಿಂದುಗಳ ನರಮೇಧ ಪ್ರಕರಣದಿಂದಾಗಿ ಇಡೀ ದೇಶ ಶೋಕಾಚರಣೆಯಲ್ಲಿ ಮುಳುಗಿದೆ. ಹೀಗಾಗಿ ಬಾಲಿವುಡ್ನ ಹೆಸರಾಂತ ಸಿಂಗರ್ಗಳು ತಮ್ಮ ಸಂಗೀತ ಕಾರ್ಯಕ್ರಮಗಳನ್ನು ರದ್ದು ಅಥವಾ ಮುಂದೂಡುವ ಮೂಲಕ ಈ ನೋವಿನಲ್ಲಿ ತಾವೂ ಭಾಗಿಯಾಗಿದ್ದಾರೆ. ಶನಿವಾರ ಸೂರತ್ನಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದನ್ನು ಮುಂದೂಡಿರುವ ಅವರು, "ಇತ್ತೀಚೆಗೆ ನಡೆದ ದುರಂತದಿಂದಾಗಿ ನಮ್ಮ ತಂಡದವರೆಲ್ಲರು ಸೇರಿ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ. ಟಿಕೆಟ್ ಖರೀದಿಸಿರುವ ಎಲ್ಲರ ಹಣವನ್ನು ಮರುಪಾವತಿ ಮಾಡಲಾಗುವುದು' ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಹಾಗೇ ಗಾಯಕ ಅರಿಜಿತ್ ಸಿಂಗ್ ಕೂಡ ಭಾನುವಾರ ಚೆನ್ನೆ$ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಹಾಗೇ ರ್ಯಾಪರ್ ಎಪಿ ಧಿಲ್ಲೋನ್ ಕೂಡ ತಮ್ಮ ಹೊಸ ಆಲ್ಬಂ ವಿಡಿಯೋ ಸಾಂಗ್ ಬಿಡುಗಡೆಯನ್ನು ಮುಂದೂಡಿದ್ದು, ಹೊಸ ದಿನಾಂಕ ಘೋಷಿಸುವುದಾಗಿ ತಿಳಿಸಿದ್ದಾರೆ. ಇನ್ನು ಅನಿರುದ್ಧ್ ರವಿಚಂದರ್ ಬೆಂಗಳೂರಿನಲ್ಲಿ ಜೂ. 1ರಂದು ನಡೆಯಲಿರುವ ಎರಡನೇ ಶೋನ ಟಿಕೆಟ್ ಮಾರಾಟವನ್ನು ರದ್ದುಗೊಳಿಸಿದ್ದು, ಹೊಸ ದಿನಾಂಕ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಹಾಗೇ ಶನಿವಾರ ಅಹಮದಾಬಾದ್ನಲ್ಲಿ ಆಯೋಜಿಸಲಾಗಿದ್ದ ಗಾಯಕ ಪಪೋನ್ ಲೈವ್ ಶೋ ಕೂಡ ರದ್ದುಗೊಳಿಸಲಾಗಿದೆ. ಇನ್ನು ಪಂಜಾಬಿ ಗಾಯಕ ಗುರು ರಂಧಾವ ಒಂದು ವಾರದವರೆಗೆ ಯಾವುದೇ ಹೊಸ ಹಾಡಿನ ರಿಲೀಸ್ ಅಥವಾ ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡದಿರಲು ನಿರ್ಧರಿದ್ದಾರೆ. &ಏಜೆನ್ಸೀಸ್