ಮಹೇಶ್ ಚಿತ್ರಕ್ಕೆ ಶ್ರೀಲೀಲಾ?; ದ್ವಿತೀಯ ನಾಯಕಿಯಾಗಿ ನಟಿಸುವ ಸಾಧ್ಯತೆ

Shreeleela
Published on

ಬೆಂಗಳೂರು: ತೆಲುಗಿನ ಸಿತಾರಾ ಎಂಟರ್​ಟೈನ್​ವೆುಂಟ್​ನ ಮುಂದಿನ ಎರಡು ಚಿತ್ರಗಳಿಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದು ಕಳೆದ ವಾರವಷ್ಟೇ ಬಂದಿತ್ತು. ಈಗ ಇನ್ನೊಂದು ಅಪ್​ಡೇಟ್ ಸಿಕ್ಕಿದ್ದು, ಆ ಎರಡು ಚಿತ್ರಗಳ ಪೈಕಿ, ಮಹೇಶ್ ಬಾಬು ಅಭಿನಯದ ಚಿತ್ರವೂ ಸೇರಿದೆಯಂತೆ. ಈ ಚಿತ್ರದಲ್ಲಿ ಮಹೇಶ್ ಬಾಬುಗೆ ದ್ವಿತೀಯ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೌದು, ಮಹೇಶ್ ಬಾಬು ಅಭಿನಯದ 28ನೇ ಚಿತ್ರವನ್ನು ಸಿತಾರಾ ಎಂಟರ್​ಟೈನ್​ವೆುಂಟ್ ನಿರ್ವಿುಸುತ್ತಿದ್ದು, ಕಳೆದ ವಾರ ಈ ಚಿತ್ರದ ಮುಹೂರ್ತ ಹೈದರಾಬಾದ್​ನಲ್ಲಿ ಮುಗಿದಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್​ಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದು, ದ್ವಿತೀಯ ನಾಯಕಿಯ ಪಾತ್ರವೂ ಇದೆಯಂತೆ. ಆ ಪಾತ್ರಕ್ಕೆ ನಿರ್ವಪಕರು ಶ್ರೀಲೀಲಾ ಅವರನ್ನು ಸಂರ್ಪಸಿದ್ದಾರಂತೆ.

ಆದರೆ, ಈ ವಿಷಯವಾಗಿ ಶ್ರೀಲೀಲಾ ಆಗಲೀ, ನಿರ್ವಪಕರಾಗಲೀ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಹಿಂದೆ, ಶ್ರೀಲೀಲಾ ಅಭಿನಯದ ಮೊದಲ ತೆಲುಗು ಚಿತ್ರ ‘ಪೆಳ್ಳಿ ಸಂದಡಿ 2’ನ ಟೀಸರ್​ನ್ನು ಮಹೇಶ್ ಬಾಬು ಬಿಡುಗಡೆ ಮಾಡಿದ್ದರು. ಈಗ ಅವರ ಜತೆಯೇ ನಾಯಕಿಯಾಗುವ ಅವಕಾಶವೊಂದು ಶ್ರೀಲೀಲಾ ಪಾಲಾಗಿದೆ ಎಂಬ ಸುದ್ದಿಯೊಂದು ಎಲ್ಲೆಡೆ ಹಬ್ಬಿದೆ. ಅದೆಷ್ಟು ನಿಜ ಎಂಬುದನ್ನು ಅವರೇ ಹೇಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net