ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಕಿರುಚಿತ್ರ ಜಂಗಮವಾಣಿ

Jangamavani
Published on

ಬೆಂಗಳೂರು: ಕಿರುಚಿತ್ರಗಳು ಸಹಜವಾಗಿ ಯೂಟ್ಯೂಬ್​ಗಳಲ್ಲಿ ಬಿಡುಗಡೆ ಆಗುತ್ತವೆ. ಅದನ್ನೂ ಮೀರಿ, ಚಿತ್ರೋತ್ಸವಗಳಲ್ಲೋ ಅಥವಾ ವಿಶೇಷ ಪ್ರದರ್ಶನಗಳಲ್ಲಿ ಪ್ರದರ್ಶನವಾಗಲಿವೆ. ಆದರೆ, ಒಂದಿಡಿ ಸಿನಿಮಾದ ರೀತಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ ಉದಾಹರಣೆ ಇಲ್ಲ. ಅದೀಗಸಾಕಾರ ವಾಗುತ್ತಿದೆ. ‘ಜಂಗಮವಾಣಿ’ ಎಂಬ ಕಿರುಚಿತ್ರ ನೇರವಾಗಿ ಆನೇಕಲ್ ಸೇರಿ ಆ ಭಾಗದ ಹಲವು ಥಿಯೇಟರ್​ಗಳಲ್ಲಿ ಬಿಡುಗಡೆ ಆಗುತ್ತಿದೆ! ಮೊಬೈಲ್​ನಿಂದ ಆಗುವ ಅನುಕೂಲ ಮತ್ತು ಅನನುಕೂಲಗಳ ಬಗ್ಗೆ ನಿರ್ದೇಶಕ ಮನು ಕಾಟ್ ಈ ಕಿರುಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಒಟ್ಟು 14 ನಿಮಿಷಗಳ ಈ ಕಿರು ಪ್ರಯತ್ನದಲ್ಲಿ ಮಕ್ಕಳೇ ಪ್ರಮುಖ ಪಾತ್ರಧಾರಿ ಗಳಾಗಿದ್ದಾರೆ. ನಿರ್ದೇಶನದ ಜತೆಗೆ ಚಿರಾಗ್ ಇವೆಂಟ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ತನು, ಪ್ರೇರಣಾ, ರಾಮಸ್ವಾಮಿ, ತೇಜಸ್ ಸೇರಿ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. ಕಿರಣ್ ಛಾಯಾಗ್ರಹಣ, ಜಿತಿನ್ ಸಂಗೀತ ನೀಡಿದ್ದಾರೆ. ಈ ಕಿರುಚಿತ್ರದ ವಿಶೇಷ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಸಂತೋಷ್ ವೆಂಕಿ ಮತ್ತು ನಿರಂಜನ್ ದೇಶಪಾಂಡೆ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net