ಮುಂದಿನ ತಿಂಗಳು ಆಪರೇಷನ್ ಇದೆ, ಯುಎಸ್‌ಗೆ ಹೋಗುತ್ತಿದ್ದೇನೆ: ಶಿವರಾಜ್ ಕುಮಾರ್ |Shivarajkumar health

shivu final
Published on

ನಟ ಶಿವರಾಜ್ ಕುಮಾರ್ ಸದ್ಯ ಆರೋಗ್ಯ ಸುಧಾರಣೆ ಆಗಿದೆ. ಮುಂದಿನ ತಿಂಗಳು ಆಪರೇಷನ್ ಇದೆ. ಯುಎಸ್‌ಎಗೆ ಹೋಗುತ್ತಿದ್ದೇನೆ ಎಂದು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ನಟ ಶಿವರಾಜ್ ಕುಮಾರ್ ನಿನ್ನೆ ನ.24 ರಂದು ಭೈರತಿ ರಣಗಲ್ ಸಿನಿಮಾದ ಗ್ರಾಂಡ್ ಸಕ್ಸಸ್‌ ಸೆಲೆಬ್ರೇಶನ್​ಗಾಗಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಶಿವಮೊಗ್ಗದ ಗೋಪಿ ವೃತ್ತದಲ್ಲಿರುವ ಮಲ್ಲಿಕಾರ್ಜುನ್ ಚಿತ್ರಮಂದಿರಕ್ಕೆ ಆಗಮಿಸಿದ ಶಿವಣ್ಣ ಅಭಿಮಾನಿಗಳ ಜೊತೆಗೆ ಭೈರತಿ ರಣಗಲ್ ಸಿನಿಮಾದ ಸಕ್ಸಸ್ ಅನ್ನು ಹಂಚಿಕೊಂಡರು.

ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂಬ ವಿಷಯ ತಿಳಿದ ಅಭಿಮಾನಿಗಳು ಚಿತ್ರಮಂದಿರ ಬಳಿ ಬೆಳಗ್ಗೆಯಿಂದಲೂ ಕಾಯುತ್ತಿದ್ದರು. ಬೈರತಿ ರಣಗಲ್ ಸ್ಟೈಲ್‌ನಲ್ಲಿ ಕ್ಯಾಸ್ಟ್ಯೂಮ್ ಹಾಕಿಕೊಂಡು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಆಗಮನವನ್ನ ಮಾಡಿಕೊಂಡ್ರು.

ಶಿವರಾಜ್ ಕುಮಾರ್ ದಂಪತಿ ಗೋಪಿ ಸರ್ಕಲ್‌ಗೆ ಬರುತ್ತಲೇ ಅಭಿಮಾನಿಗಳು ಘೋಷಣೆಯನ್ನು ಕೂಗಿದರು. ಚಿತ್ರತಂಡದ ಜೊತೆ ಫ್ಯಾನ್ಸ್ಗಳಿಗೆ ಧನ್ಯವಾದ ತಿಳಿಸಿದ ಶಿವರಾಜ್ ಕುಮಾರ್ ಅಭಿಮಾನಿಗಳ ಅಭಿಮಾನಕ್ಕೆ ಖುಷಿಯಾದ್ರು.

ಅಭಿಮಾನಿಗಳ ಜತೆ ಮಾತನಾಡಿದ ಶಿವಣ್ಣ, ಎಲ್ಲಾ ಕಡೆಗಳಲ್ಲಿ ಬೈರತಿ ರಣಗಲ್ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಕಲೆಕ್ಷನ್ ಸಹ ಚೆನ್ನಾಗಿದೆ ಎಂದರು. ಸದ್ಯ 45 ಸಿನಿಮಾ ರೆಡಿಯಾಗುತ್ತಿದೆ. ತೆಲುಗಿನಲ್ಲಿ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಈಸೂರು ದಂಗೆ ಬಗ್ಗೆ ಚಿತ್ರ ಮಾಡಬೇಕು ಎಂದು ನಿರ್ದೇಶಕರ ಜೊತೆ ಮಾತನಾಡಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net