ವೆಬ್​ಸೀರೀಸ್​ನಲ್ಲಿ ಶಿವರಾಜಕುಮಾರ್?

Shivanna
Published on

ಬೆಂಗಳೂರು: ಕನ್ನಡದಲ್ಲಿ ಮೊದಲಿಗೆ ವೆಬ್ ಸೀರೀಸ್ ಮಾಡುವ ಪ್ರಯತ್ನ ಮಾಡಿದ್ದು ಆರ್​ಜೆ ಪ್ರದೀಪ ಅವರ ಸಖತ್ ಸ್ಟುಡಿಯೋಸ್. ಐದು ವರ್ಷಗಳ ಹಿಂದೆ ಸುನೀಲ್ ರಾವ್ ಅಭಿನಯದಲ್ಲಿ ‘ಲೂಸ್ ಕನೆಕ್ಷನ್’ ಎಂಬ ವೆಬ್ ಸರಣಿ ನಿರ್ವಿುಸಿದ್ದ ಸಖತ್ ಸ್ಟುಡಿಯೋಸ್, ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಜತೆಗೂಡಿ ‘ಹೇಟ್ ಯೂ ರೋಮಿಯೋ’ ಎಂಬ ಸರಣಿ ನಿರ್ಮಾಣ ಮಾಡಿತ್ತು. ವಿಯೆಟ್ನಾಂನಲ್ಲಿ ಚಿತ್ರೀಕರಣಗೊಂಡಿರುವ ಈ ಸರಣಿ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಈ ಮಧ್ಯೆ, ಶಿವರಾಜಕುಮಾರ್ ಅವರಿಗಾಗಿ ಒಂದು ಕಥೆ ಮಾಡಲಾಗಿದ್ದು, ಅದಕ್ಕೆ ‘ಓಂಕಾರ’ ಎಂಬ ಹೆಸರನ್ನೂ ಇಡಲಾಗಿದೆ. ಕಥೆ ಕೇಳಿ ಶಿವಣ್ಣ ಸಹ ಮೆಚ್ಚಿಕೊಂಡಿ ದ್ದಾರಂತೆ. ಎಲ್ಲವೂ ಅಂದುಕೊಂಡಂತೆ ಆದರೆ, ‘ಓಂಕಾರ’ ಮೂಲಕ ಶಿವಣ್ಣ ವೆಬ್ ಸೀರೀಸ್ ಜಗತ್ತಿಗೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕೊಂದಿಷ್ಟು ಸಮಯವಿದೆ. ಸದ್ಯ ‘ಘೋಸ್ಟ್’ ಸೇರಿದಂತೆ ಹಲವು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದು, ಅವೆಲ್ಲ ಮುಗಿಸಿ ‘ಓಂಕಾರ’ ಹಾಕುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net