ಇಂದು ದೇಶದಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಹೌದು, ಧ್ವಜಾರೋಹಣ ಮಾಡಿ, ರಾಷ್ಟ್ರ ಗೀತೆ ಹಾಡಿ, ಎಲ್ಲಾ ರಾಜ್ಯಗಳ ಕಲೆಯನ್ನು ಗೌರವಿಸಿ, ದೇಶಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸುವ ದಿನ ಇದಾಗಿದೆ. ಹಾಗಾಗಿ, ಈ ಸಂದರ್ಭದಲ್ಲಿ ಸೆಂಚುರಿ ಸ್ಟಾರ್ ನಟ ಶಿವರಾಜ್ಕುಮಾರ್ ಅವರು ಮೈಸೂರಿನ ಶಕ್ತಿಧಾಮದಲ್ಲಿ ಪತ್ನಿ ಗೀತಾ ಶಿವರಾಜ್ಕುಮಾರ್ ಜೊತೆ ಸೇರಿ ಧ್ವಜಾರೋಹಣ ಮಾಡಿದ್ದಾರೆ.