ಒಂದೇ ಚಿತ್ರದಲ್ಲಿ ಶಿವರಾಜಕುಮಾರ್- ಪುನೀತ್ ರಾಜಕುಮಾರ್

Appu Shivanna
Published on

ಬೆಂಗಳೂರು: ‘ಒಂದು ಕಥೆ ಕೇಳಿದ್ದೇನೆ. ಆ ಕಥೆಯಲ್ಲಿ ನನ್ನ ಮತ್ತು ಅಪು್ಪನನ್ನು ನೋಡುತ್ತೀರಿ!’- ಹೀಗೊಂದು ಮಾತನ್ನು ನಟ ಶಿವರಾಜ್​ಕುಮಾರ್ ‘ಜೇಮ್್ಸ’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಹೇಳಿ, ಅಭಿಮಾನಿಗಳ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದರು. ಅದ್ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದರೂ, ಅದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಒಟ್ಟಿಗೆ ಸಿನಿಮಾದಲ್ಲಿ ನಟಿಸುವ ಕುರಿತು ಅಪ್ಪು ಮತ್ತು ಶಿವಣ್ಣ ನಡುವೆ ಮಾತುಕತೆ ನಡೆದಿತ್ತು. ಅದರಂತೆ ಹಲವು ಕಥೆಗಳನ್ನು ಕೇಳಿದ್ದರಾದರೂ ಯಾವುದೂ ಅಂತಿಮವಾಗಿರಲಿಲ್ಲ. ಇದೀಗ ಆ ಕನಸನ್ನು ಬೇರೆ ರೀತಿಯಲ್ಲಿ ನನಸು ಮಾಡಲು ಶಿವರಾಜ್​ಕುಮಾರ್ ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡುವ ಶಿವಣ್ಣ, ‘ಒಟ್ಟಿಗೆ ನಟಿಸುವ ಸಲುವಾಗಿ ಹಲವು ಕಥೆ ಕೇಳಿದ್ದೆವು. ಆದರೆ ಅದ್ಯಾವುದೂ ಕೈಗೂಡಲಿಲ್ಲ. ಇದೀಗ ಆಂಧ್ರದ ನಿರ್ದೇಶಕರೊಬ್ಬರು ಒಂದೊಳ್ಳೆ ಕಥೆ ಹೇಳಿದ್ದಾರೆ. ಅದರಲ್ಲಿ ನನ್ನನ್ನು ಮತ್ತು ಅಪ್ಪು ಇಬ್ಬರನ್ನೂ ನೋಡುತ್ತೀರಿ. ಇದೊಂದು ಭಾವನಾತ್ಮಕ ಸ್ಕ್ರೀಪ್ಟ್’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net