ಮತ್ತೊಂದೆಡೆ, ನಟ ಶಿವರಾಜ್ಕುಮಾರ್ ಅವರು ಸ್ಟೈಲ್ ಆಗಿ ಹ್ಯಾಟ್ ಮೇಲಕ್ಕೆ ಎಗರಿಸಿದ್ದು, ಅದು ನೇರವಾಗಿ ನಟನ ತಲೆ ಮೇಲೆಯೇ ಬಿಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟನ ಟೈಮಿಂಗ್ ಮತ್ತು ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಅಭಿಮಾನಿಗಳಿಗಂತೂ ಶಿವಣ್ಣನ ಈ ಸ್ಟೈಲ್ ತುಂಬಾನೆ ಇಷ್ಟವಾಗಿದೆ. ಇದು, #CAPChallenge ಎಂಬ ಅಭಿಯಾನದ ಅಂಗವಾಗಿ ತೆಗೆದಿರುವ ವಿಡಿಯೋ ಎನ್ನಲಾಗಿದೆ.