

'ಮಫ್ತಿ' ನೋಡಿದವರಿಗೆ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಒಂದು ಕುತೂಹಲ ಇದ್ದೇ ಇತ್ತು. 'ಭೈರತಿ ರಣಗಲ್' ಹಿಂದಿನ ಅಸಲಿ ಕಥೆಯೇನು? ಗ್ಯಾಂಗ್‌ಸ್ಟರ್ ಆಗಿ ಬದಲಾಗಿದ್ದು ಯಾಕೆ? ಅನ್ನೋದನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಇನ್ನು ಶಿವಣ್ಣನ ಮ್ಯಾನರಿಸಂ ಅನ್ನು ಕಣ್ತುಂಬಿಕೊಳ್ಳಬೇಕು ಅಂತ ಬಂದವರೇ ಹೆಚ್ಚಿದ್ದರು. ಜೊತೆಗೆ ನಿರ್ದೇಶಕ ನರ್ತನ್ ಮೇಲಿನ ನಂಬಿಕೆ. ಇವೆಲ್ಲವೂ ಸಿನಿಮಾದ ಮೇಲೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. 7ನೇ ದಿನವಾದ ನಿನ್ನೆ ಈ ಸಿನಿಮಾ 70 ರಿಂದ 80 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯ ಲೆಕ್ಕ ಹಾಕಿದೆ.
'ಭೈರತಿ ರಣಗಲ್' ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೋ ಅಂತ ಕುತೂಹಲವಿತ್ತು. ಅದಕ್ಕೀಗ ಪ್ರೇಕ್ಷಕರು ಪಾಸಿಟಿವ್ ಆಗಿ ರೆಸ್ಪಾನ್ಸ್ ಮಾಡಿದ್ದಾರೆ.
7 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
ಮೊದಲನೇ ದಿನ 2.10 ಕೋಟಿ ರೂಪಾಯಿ
ಎರಡನೇ ದಿನ 2.30 ಕೋಟಿ ರೂಪಾಯಿ
ಮೂರನೇ ದಿನ 3.40 ಕೋಟಿ ರೂಪಾಯಿ
ನಾಲ್ಕನೇ ದಿನ 1.60 ಕೋಟಿ ರೂಪಾಯಿ
ಐದನೇ ದಿನ 1.30 ಕೋಟಿ ರೂಪಾಯಿ
ಆರನೇ ದಿನ 0.80 ಕೋಟಿ ರೂಪಾಯಿ
ಏಳನೇ ದಿನ 0.70 ಕೋಟಿ ರೂಪಾಯಿ ಒಟ್ಟು 12.80 ಕೋಟಿ ರೂಪಾಯಿಯಾಗಿದೆ.