

ಮುಂಬೈ: ಬಾಲಿವುಡ್ನ ಹೆಸರಾಂತ ನಟಿ ಶಿಲ್ಪಾ ಶೆಟ್ಟಿ ದಂಪತಿ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಈ ಸಂತಸವನ್ನು ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ದಂಪತಿಗೆ ಫೆ.15ರಂದು ಹೆಣ್ಣು ಮಗು ಹುಟ್ಟಿದೆ. ಸರೋಗಸಿ ಮೂಲಕ ಹುಟ್ಟಿರುವ ಈ ಮಗುವಿಗೆ ವಿಶೇಷವಾದ ಹೆಸರನ್ನಿಡಲಾಗಿದೆ. ಸಮಿಷಾ ಎನ್ನುವ ವಿಶೇಷವಾದ ಹೆಸರನ್ನಿಡಲಾಗಿದ್ದು ಅದರ ವಿಶೇಷತೆಯನ್ನೂ ಸಹ ನಟಿ ಹಂಚಿಕೊಂಡಿದ್ದಾರೆ.
ಸ ಎಂದರೆ ಸಂಸ್ಕೃತದಲ್ಲಿ ಹೊಂದುವುದು ಎಂದರ್ಥ, ಹಾಗೆಯೇ ಮಿಷಾ ಎಂದರೆ ರಷ್ಯನ್ ಭಾಷೆಯಲ್ಲಿ ದೇವರಂತವರು ಎಂದರ್ಥ. ಎಂದರೆ ನಮ್ಮನೆಗೆ ಲಕ್ಷ್ಮಿ ದೇವರೇ ಈ ಹೆಣ್ಣು ಮಗುವಿನ ರೂಪದಲ್ಲಿ ಬಂದಿದ್ದಾರೆಂದು ಅರ್ಥ ಎಂದು ನಟಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
2009ರಲ್ಲಿ ರಾಜ್ ಕುಂದ್ರಾ ಜತೆ ದಾಂಪತ್ಯ ಜೀವನವನ್ನು ಆರಂಭಿಸಿದ ನಟಿಗೆ ವಿಯಾನ್ ಹೆಸರಿನ ಮಗನಿದ್ದಾನೆ. 13 ವರ್ಷಗಳ ಕಾಲ ಸಿನಿಮಾ ರಂಗದಿಂದ ಹೊರಗುಳಿದಿದ್ದ ನಟಿ ಸಬ್ಬೀರ್ ಖಾನ್ ಅವರ ನಿಕಮ್ಮ ಚಿತ್ರದೊಂದಿಗೆ ಬಾಲಿವುಡ್ಗೆ ಮರಳುತ್ತಿದ್ದಾರೆ. ಅಭಿಮನ್ಯು ದಸ್ಸಾನಿ ಮತ್ತು ಯೂಟ್ಯೂಬ್ ಸ್ಟಾರ್ ಶೆರ್ಲಿ ಸೆಟಿಯಾ ನಟಿಸಿರುವ ಈ ಚಿತ್ರ ಇದೇ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. (ಪಿಟಿಐ)