ಟ್ರೋಲ್ ಪೇಜ್‌ಗಳ ವಿರುದ್ಧ ಶೀತಲ್ ಗರಂ

Sheetal Shetty - Final
Published on

ಬೆಂಗಳೂರು: ನಟಿ-ನಿರ್ದೇಶಕಿ ಶೀತಲ್ ಶೆಟ್ಟಿ ಗರಂ ಆಗಿದ್ದಾರೆ. ಅದಕ್ಕೆ ಕಾರಣ, ಕೆಲವು ಟ್ರೋಲ್ ಪೇಜ್‌ಗಳಲ್ಲಿ ಕನ್ನಡದ ನಟಿಯರ ಬಗ್ಗೆ ಅವಹೇಳನಕಾರಿಯಾಗಿ ಟ್ರೋಲ್ ಮಾಡಲಾಗಿದೆ. ಈ ಬಗ್ಗೆ ಮೌನ ಮುರಿದಿರುವ ಶೀತಲ್, ಅಂತಹ ಟ್ರೋಲ್ ಪೇಜ್‌ಗಳಿಗೆ ಧಿಕ್ಕಾರ ಕೂಗಿದ್ದಾರೆ.

‘ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ. ನನಗಿದರಿಂದ ವೈಯಕ್ತಿಕವಾಗಿ ಏನೂ ಆಗಬೇಕಾಗಿಲ್ಲ. ಆದರೆ, ಹೆಣ್ಣಾಗಿ ನನಗೆ ಸಹಿಸಲು ಸಾಧ್ಯ ಆಗದಿರುವಂಥದ್ದು. ಅದೇ ಕಾರಣಕ್ಕೆ ಮಾತನಾಡುವ ಧೈರ್ಯ ಮಾಡುತ್ತಿದ್ದೇನೆ. ತನ್ನ ಆಯ್ಕೆಗಳನ್ನು ದಿಟ್ಟವಾಗಿ ಮಾಡಿಕೊಂಡು ಮುಂದೆ ಹೋಗುತ್ತಿರುವ ಯಾರೋ ಹೆತ್ತ ಹೆಣ್ಣು ಮಕ್ಕಳಿಗೆ, ಕೆಟ್ಟ ಶಬ್ಧಗಳಿಂದ ಅವಮಾನ ಮಾಡುತ್ತಿರುವ ಅಷ್ಟೇ ಹುಂಬ ಮನಸ್ಥಿತಿಗಳಿಗೆ, ಹಾಗೆಯೇ ಅದನ್ನು ಎಂಜಾಯ್ ಮಾಡುತ್ತಿರುವ ಮನಸ್ಥಿತಿಗಳಿಗೆ ನನ್ನದೊಂದು ಧಿಕ್ಕಾರ. ನಾಳೆಯಿಂದ ಈ ಮನಸ್ಥಿತಿಗಳು ನನ್ನನ್ನು ಕಾಡಬಹುದು ಎನ್ನುವ ಅರಿವಿದ್ದರೂ, ನನಗ್ಯಾಕೋ ಸುಮ್ಮನಿರುವ ಮನಸ್ಸಾಗುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ದಯವಿಟ್ಟು ಇಂಥವುಗಳನ್ನು ನೋಡಿ ಎಂಜಾಯ್ ಮಾಡಬೇಡಿ, ಸಪೋರ್ಟ್ ಮಾಡಬೇಡಿ ಎಂದಿರುವ ಅವರು, ‘ಇದು ಸಮಾಜಕ್ಕೆ ಮಾರಕ. ಇಂಥವುಗಳನ್ನು ಕಂಡಾಗ ಖಂಡಿಸಿ, ನಮ್ಮ ನಾಡಿನ ಸ್ವಾಸ್ತ್ಯ ಕಾಪಾಡಿ’ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net