

‘ಪಠಾಣ್’, ಅಟ್ಲಿ ಮತ್ತು ರಾಜಕುಮಾರ್ ಹಿರಾನಿ ನಿರ್ದೇಶನದ ಹೊಸ ಚಿತ್ರಗಳನ್ನು ಒಪ್ಪಿಕೊಂಡಿರುವ ಶಾರೂಖ್, ಡಿಸ್ನಿ ಹಾಟ್ಸ್ಟಾರ್ನ ಹೊಸ ವೆಬ್ಸರಣಿಯೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಕುರಿತು ಪ್ರೋಮೋ ಶೇರ್ ಮಾಡಿದ್ದಾರೆ. ‘ಡಿಸ್ನಿ ಹಾಟ್ಸ್ಟಾರ್ನಲ್ಲಿ ನಾನ್ಸ್ಟಾಪ್ ಕ್ರಿಕೆಟ್, ದೊಡ್ಡದೊಡ್ಡ ಸ್ಟಾರ್ಗಳು, ಬ್ಲಾಕ್ಬಸ್ಟರ್ ಚಿತ್ರಗಳು, ಎಕ್ಸ್ಕ್ಲೂಸಿವ್ ವೆಬ್ಸರಣಿಗಳು ... ಎಲ್ಲವೂ ಇದೆ, ಶಾರೂಖ್ ಖಾನ್ ಒಬ್ಬರನ್ನು ಬಿಟ್ಟು ...’ ಎಂದು ಆ ಪ್ರೋಮೋ ಅಂತ್ಯವಾಗುತ್ತದೆ.
ಆ ಪ್ರೋಮೋ ಹಂಚಿಕೊಂಡಿರುವ ಶಾರೂಖ್, ‘ಪಿಕ್ಚರ್ ಅಭಿ ಬಾಕಿ ಹೇ ದೋಸ್ತೋನ್...’ ಎಂದು ಸೂಚ್ಯವಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ, ಸದ್ಯದಲ್ಲೇ ಇನ್ನೊಂದು ಪ್ರೋಮೋ ಹೊರಬರಲಿದ್ದು, ಅದರಲ್ಲಿ ಶಾರೂಖ್ ಒಟಿಟಿಗೆ ಎಂಟ್ರಿ ಕೊಡುವ ಕುರಿತು ಅಧಿಕೃತವಾಗಿ ಘೋಷಿಸಲಾಗುತ್ತದಂತೆ.