ಶಾರುಖ್ ಖಾನ್​, ಆಲಿಯಾ ಭಟ್ ಜಂಟಿಯಾಗಿ ಸಿನಿಮಾ ನಿರ್ಮಾಣ...

Sharukh
Published on

ಬಾಲಿವುಡ್​ನಲ್ಲಿ ಸಾಕಷ್ಟು ನಟಿಯರು ನಟನೆಯ ಜತೆಗೆ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ತೆರೆದು ಅದರಲ್ಲೂ ಬಿಜಿಯಾಗಿದ್ದಾರೆ. ಇದೀಗ ಆ ಸಾಲಿಗೆ ನಟಿ ಆಲಿಯಾ ಭಟ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ನಿರ್ಮಾಣ ಸಂಸ್ಥೆ ತೆರೆದಿರುವ ಆಲಿಯಾ, ಮೊದಲ ಚಿತ್ರವನ್ನೂ ಘೋಷಣೆ ಮಾಡಿದ್ದಾರೆ. ಅದೂ ಬಾಲಿವುಡ್ ಬಾದ್​ಷಾ ಶಾರುಖ್ ಖಾನ್ ಜತೆಗೆ ಎಂಬುದು ವಿಶೇಷ!

ಹೌದು, ‘ಡಾರ್ಲಿಂಗ್ಸ್’ ಶೀರ್ಷಿಕೆಯ ಚಿತ್ರವನ್ನು ಶಾರುಖ್ ಖಾನ್ ತಮ್ಮ ರೆಡ್ ಚಿಲ್ಲೀಸ್ ಎಂಟರ್​ಟೈನ್​ವೆುಂಟ್​ನಲ್ಲಿ ನಿರ್ಮಾಣ ಮಾಡುವುದಾಗಿ ಸೋಮವಾರ ಘೋಷಿಸಿಕೊಂಡಿದ್ದಾರೆ. ಇದೇ ಚಿತ್ರಕ್ಕೆ ಆಲಿಯಾ ಭಟ್ ನೂತನವಾಗಿ ಶುರುಮಾಡಿರುವ ಎಟರ್ನಲ್ ಸನ್​ಶೈನ್ ಪ್ರೊಡಕ್ಷನ್ಸ್ ಅಡಿ ‘ಡಾರ್ಲಿಂಗ್ಸ್’ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಬರೀ ನಿರ್ಮಾಣ ಮಾಡುವುದಷ್ಟೇ ಅಲ್ಲ ಚಿತ್ರದಲ್ಲಿ ನಾಯಕಿಯಾಗಿಯೂ ಆಲಿಯಾ ನಟಿಸಲಿದ್ದಾರೆ.

ಅಂದಹಾಗೆ, ಈ ಸಿನಿಮಾ ಹಲವು ಮೊದಲುಗಳಿಗೆ ಸಾಕ್ಷಿಯಾಗುತ್ತಿದೆ. ನಿರ್ವಪಕಿಯಾಗಿ ಆಲಿಯಾಗಿದು ಮೊದಲ ಸಿನಿಮಾ ಎಂಬುದು ಒಂದೆಡೆ ಯಾದರೆ, ಕತೆ, ಚಿತ್ರಕಥೆ ಬರೆಯುತ್ತಿದ್ದ ಜಸ್​ವಿುೕತ್ ರೀನ್ ‘ಡಾರ್ಲಿಂಗ್ಸ್’ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿಸಿ ಕೊಂಡಿರುವ ಈ ಚಿತ್ರ, ಇದೇ ತಿಂಗಳಲ್ಲಿ ಶೂಟಿಂಗ್​ಗೆ ಸಜ್ಜಾಗಲಿದೆ. 2016ರಲ್ಲಿ ಆಲಿಯಾ ಭಟ್ ನಟಿಸಿದ್ದ ಲವ್ ಯೂ ಜಿಂದಗಿ ಚಿತ್ರಕ್ಕೂ ಶಾರುಖ್ ಬಂಡವಾಳ ಹೂಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net