ಶಾರುಖ್ ಖಾನ್ ಕಡೆಯಿಂದ ಬಾಲಿವುಡ್ ಸಿನಿಮಾ ಕಾರ್ಮಿಕರು ಮತ್ತು ಬಡವರಿಗಾಗಿ ಪ್ರಣಾಳಿಕೆಯೇ ಬಂತು ನೋಡಿ!!

sharukh
Published on

ಸದ್ಯ ಕರೊನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಎಲ್ಲ ಕ್ಷೇತ್ರಗಳಂತೆ, ಸಿನಿಮಾ ಕ್ಷೇತ್ರದಲ್ಲೂ ಈಗ ಎಲ್ಲವೂ ನೀರಸ. ಸಿನಿಮಾ ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ. ಹಾಗಂತ ಅವರಿಗೆ ಏನೂ ಸಿಗುತ್ತಿಲ್ಲ ಎಂದಲ್ಲ. ಎಲ್ಲ ಇಂಡಸ್ಟ್ರಿಗಳಲ್ಲಿ ಅಲ್ಲಿನ ಸಿನಿಮಾ ಕಲಾವಿದರು ಕೈಲಾದ ಮಟ್ಟಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಈಗ ಚೂರು ತಡವಾದರೂ ದೊಡ್ಡ ಪಟ್ಟಿಯನ್ನೇ ಹಿಡಿದು ಬಂದಿದ್ದಾರೆ ಬಾಲಿವುಡ್​ ಬಾದ್ಶಾ ಶಾರುಖ್​ ಖಾನ್​!

ಹೌದು, ಒಂದಲ್ಲ ಎರಡಲ್ಲ ತಮ್ಮ ಮತ್ತು ಪತ್ನಿ ಗೌರಿ ಖಾನ್​ ಹೆಸರಿನಲ್ಲಿ ಹತ್ತಾರು ಚಾರಿಟಿ ಮತ್ತು ಮೀರ್​ ಚಾರಿಟಿ ವತಿಯಿಂದ ಹಲವು ಸಂಸ್ಥೆಗಳ ನೆರವಿಗೆ ಧಾವಿಸಿದ್ದಾರೆ. ಅವೆಲ್ಲವುಗಳ ವಿವರ ಇಲ್ಲಿದೆ.

1. ಪಿಎಂ ಕೇರ್ಸ್​ಗೆ ನಿಧಿ: ಶಾರುಖ್​ ಖಾನ್, ಗೌರಿ ಖಾನ್, ಜೂಹಿ ಚಾವ್ಲಾ, ಜಯ್ ಮೆಹ್ತಾ ಒಡೆತನದ ಕೊಲ್ಕತ್ತ ನೈಟ್​ ರೈಡರ್ಸ್​ ನಿಂದ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ.

2. ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿ: ರೆಡ್​ ಚಿಲ್ಲಿಸ್​ ಮಾಲೀಕರಾದ ಗೌರಿ ಖಾನ್, ಅವರಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ.

3. ಪರ್ಸನಲ್​ ಪ್ರೊಟೆಕ್ಟಿವ್​ ಇಕ್ವಿಪ್ಮೆಂಟ್​ ಫಾರ್​ ಹೆಲ್ತ್​ಕೇರ್​ ಪ್ರೊವೈಡರ್ಸ್​: ಕೆಕೆಆರ್​ ಮತ್ತು ಮೀರ್​ ಫೌಂಡೇಶನ್​ ಪಶ್ಚಿಮ ಬಂಗಾಲ ಮತ್ತು ಮಹಾರಾಷ್ಟ್ರ ಸರ್ಕಾರದ ಜತೆ ಕೈ ಜೋಡಿಸಿ 50000 ಪಿಪಿಇ ಕಿಟ್​​ ವಿತರಿಸಲಿದೆ.

4. ಏಕ್  ಸಾಥ್​: ಮುಂಬೈನಲ್ಲಿನ 5500 ಸಿನಿಮಾ ಕಾರ್ಮಿಕ ಕುಟುಂಬಗಳಿಗೆ ಅವಶ್ಯಕತೆಗಳಿಗೆ ತಕ್ಕಂತೆ ಒಂದು ತಿಂಗಳುಗಳ ಕಾಲ ಉತ್ಕೃಷ್ಟ ಮಟ್ಟದ ಆಹಾರ ಪೂರೈಕೆ.

5. ರೋಟಿ ಫೌಂಡೇಷನ್​: ಮಹಾರಾಷ್ಟ್ರ ಡಿಜಿಪಿ ಡಿ ಶಿವನಂದನ್​ ತೆರೆದಿರುವ ರೋಟಿ ಫೌಂಡೇಷನ್​ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕಾರ್ಯಕ್ಕೆ ಕೈ ಜೋಡಿಸಿರುವ ಶಾರುಖ್​, ಮೂರು ಲಕ್ಷ ಊಟದ ಕಿಟ್​ ಅಂದರೆ ನಿತ್ಯ 10 ಸಾವಿರ ಜನಕ್ಕೆ ಪ್ರತಿ ದಿನ ಪೂರೈಕೆ ಮಾಡಲಿದ್ದಾರೆ.

6. ವರ್ಕಿಂಗ್ ಪೀಪಲ್ಸ್ ಚಾರ್ಟರ್​: ದೆಹಲಿಯಲ್ಲಿನ 2500 ದಿನಗೂಲಿ ನೌಕಕರರಿಗೆ ದಿನಸಿ ಸಾಮಾಗ್ರಿ ವಿತರಣೆ.

7. ಆ್ಯಸಿಡ್​ ದಾಳಿ ಸಂತ್ರಸ್ತರಿಗೆ ಬೆಂಬಲ: ಆ್ಯಸಿಡ್​ ದಾಳಿಗೊಳಗಾದ 100 ಜನರಿಗೆ ಪ್ರತಿ ತಿಂಗಳು 2500 ವಿತರಣೆ. ಉತ್ತರ ಪ್ರದೇಶ, ದೆಹಲಿ, ಬಿಹಾರ, ಪಶ್ಚಿಮ ಬಂಗಾಲ ಮತ್ತು ಉತ್ತರಖಂಡದಲ್ಲಿ ಗುರುತಿಸಲ್ಪಟ್ಟವರಿಗೆ ಈ ಮೊತ್ತ ಸಿಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net