ನವನೀತ್ ನಿರ್ದೇಶನದ ಸಿನಿಮಾಗೆ ಶರಣ್ ನಾಯಕ

Sharan
Published on

ಬೆಂಗಳೂರು: ರವಿಚಂದ್ರನ್ ಮತ್ತು ಆರ್​ಜೆ ರೋಹಿತ್ ಅಭಿನಯದ ‘ಬಕಾಸುರ’ ನಿರ್ದೇಶಿಸಿದ್ದೇ ಕೊನೆ, ಆ ನಂತರ ನವನೀತ್ ನಿರ್ದೇಶನದ ಯಾವೊಂದು ಚಿತ್ರ ಸಹ ಸೆಟ್ಟೇರಿರಲಿಲ್ಲ. ಇದೀಗ ಅವರು ಶರಣ್ ಅಭಿನಯದ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ಸಹ ಸದ್ದಿಲ್ಲದೆ ನಡೆದಿದೆ. ಮುಹೂರ್ತದಲ್ಲಿ ತರುಣ್ ಸುಧೀರ್ ಹಾಜರಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರವನ್ನು ನಿರ್ವಿುಸುತ್ತಿರುವವರು ತರುಣ್ ಶಿವಪ್ಪ.

ಈ ಹಿಂದೆ ‘ಮಾಸ್ ಲೀಡರ್’ ಮತ್ತು ‘ವಿಕ್ಟರಿ 2’ ಚಿತ್ರಗಳನ್ನು ನಿರ್ವಿುಸಿದ್ದ ತರುಣ್, ಈಗ ನವನೀತ್ ನಿರ್ದೇಶನದ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಹಾರರ್-ಕಾಮಿಡಿ ಕಥೆ ಇರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಶರಣ್​ಗೆ ನಾಯಕಿ ಮತ್ತು ಇನ್ನುಳಿದ ತಾರಾಗಣದ ಆಯ್ಕೆಯಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಚಿತ್ರತಂಡದ ಆಯ್ಕೆ ಪೂರ್ಣವಾಗಲಿದೆ. ಬೆಂಗಳೂರು ಮತ್ತು ಉತ್ತರಖಂಡದಲ್ಲಿ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net