ವೈಟ್​ ಬಿಕಿನಿ, ದೊಡ್ಡ ಹ್ಯಾಟ್​ ತೊಟ್ಟ ಫೋಟೋ ಹಂಚಿಕೊಂಡ ಶನಾಯ ಕಪೂರ್; ಬೆಲೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ...

shanaya
Published on

ಮುಂಬೈ: ಬಾಲಿವುಡ್​ ನಟಿ ಶನಾಯ ಕಪೂರ್​ ಇತ್ತೀಚೆಗೆ ತಮ್ಮ ಹಿಂದಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ವೈಟ್​​ ಬಿಕಿನಿ ಜತೆ ವೈಟ್​ ಕಲರ್​ ಶೀರ್​ ಸರೊಂಗ್​ನಿಂದ ಡಿಸೈನ್​ ಮಾಡಿಕೊಂಡು ಓವರ್​ಸೈಜಡ್​ ಹ್ಯಾಟ್​ ತೊಟ್ಟಿರುವ ನಟಿಯ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬೋಲ್ಡ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶನಾಯಾ ಹಂಚಿಕೊಂಡಿದ್ದಾರೆ. ಮಾನಸಿಕವಾಗಿ ನಾನು ಮೆಕ್ಸಿಕೋದ ಬೀಚ್​ ಬಳಿ ಕುಳಿತು ಟ್ಯಾಕೋಸ್​ಗೆ ಆರ್ಡರ್​ ಮಾಡುತ್ತಿದ್ದೇನೆ ಎಂದು ಫೋಟೋ ಜತೆ ಬರೆದುಕೊಂಡಿದ್ದಾರೆ. ನಟಿಯ ಫೋಟೋಗೆ ಸುಹಾನಾ ಖಾನ್​, ಅನನ್ಯಾ ಪಾಂಡೆ ಸೇರಿ ಅನೇಕರು ಸೆಲೆಬ್ರಿಟಿಗಳೂ ಕಾಮೆಂಟ್​ ಮಾಡಿದ್ದಾರೆ.

ಅಂದ ಹಾಗೆ ಶನಾಯಾ ತೊಟ್ಟಿರುವ ಬಿಕಿನಿ ಮತ್ತು ಹ್ಯಾಟ್​ನ ಬೆಲೆಯೆಷ್ಟು ಗೊತ್ತೇ? ಆ ವೈಟ್ ಬಿಕಿನಿ ಓಕಿಯೋ ಬ್ರ್ಯಾಂಡ್​ನದ್ದು. ಅದರ ಬೆಲೆ ಸರಿ ಸುಮಾರು 7,254 ರೂಪಾಯಿ. ಓವರ್​ ಸೈಜಡ್​ ಹ್ಯಾಟ್​ ಮೈರಾ ಬ್ರ್ಯಾಂಡ್​ನದ್ದಾಗಿದ್ದು ಅದರ ಬೆಲೆ ಬರೋಬ್ಬರಿ 10 ಸಾವಿರ ರೂಪಾಯಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net