ಮದುವೆ ಹೆಸರಲ್ಲಿ ಶಾಮ್ನಾಗೆ ವಂಚನೆ ಪ್ರಕರಣ: ಶತ್ರು ಪಕ್ಕದಲ್ಲೇ ಇದ್ರೂ ನಟಿಗೆ ಗೊತ್ತಾಗಲಿಲ್ಲ!

Shamna
Published on

ಕೊಚ್ಚಿ: ಮದುವೆ ಹೆಸರಲ್ಲಿ ನಟಿ ಶಾಮ್ನಾ ಕಾಸಿಂಗೆ ವಂಚಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರಿಗೆ ಸ್ಪೋಟಕ ಮಾಹಿತಿಗಳು ಲಭ್ಯವಾಗಿದ್ದು, ಮಹಿಳೆಯರು ಸೇರಿದಂತೆ ಅನೇಕರು ಈ ವಂಚನೆ ಜಾಲದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಇಡುಕ್ಕಿ ಮೂಲದ ಮಹಿಳಾ ಮೇಕಪ್​ ಆರ್ಟಿಸ್ಟ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಂದಹಾಗೆ ಮೇಕಪ್​ ಆರ್ಟಿಸ್ಟ್​, ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಫೀಕ್​ಗೆ ಸಂಬಂಧಿಯಾಗಿದ್ದಾರೆ. ರಫೀಕ್​ ಪರವಾಗಿ ಶಾಮ್ನಾ ಕಾಸಿಂಗೆ ಮದುವೆ ಪ್ರಸ್ತಾಪ ಇಟ್ಟಿದ್ದು ಇದೇ ಮೇಕಪ್​ ಆರ್ಟಿಸ್ಟ್​ ಎಂದು ಗೊತ್ತಾಗಿದೆ.

ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡರೆ ನಿಮಗೇ ಲಾಭ. ಹುಡುಗನ ಮನೆಯವರು ಆರ್ಥಿಕವಾಗಿ ತುಂಬಾ ಪ್ರಬಲವಾಗಿದ್ದಾರೆ ಎಂದು ಶಾಮ್ನಾಗೆ ನಂಬಿಸಿದ್ದಾಳೆ. ಅಲ್ಲದೆ, ಶಾಮ್ನಾ ಕುಟುಂಬಕ್ಕೆ ಕರೆ ಮಾಡಿ ನಾನು ವರನ ಸಂಬಂಧಿಯಂತಲೂ ಹೇಳಿಕೊಂಡಿದ್ದಾಳೆ. ಸದ್ ನಾಪತ್ತೆಯಾಗಿರುವ ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಸೋಮವಾರ ಶಾಮ್ನಾ ಕಾಸಿಂ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಪ್ರಸ್ತುತ ನಟಿ ಶಾಮ್ನಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಸೋಮವಾರ ಕೊಚ್ಚಿಗೆ ತೆರಳಿ ಪೊಲೀಸರಿಗೆ ಹೇಳಿಕೆ ನೀಡಲಿದ್ದಾರೆ. ಮೇಕಪ್​ ಆರ್ಟಿಸ್ಟ್​ ಸೇರಿದಂತೆ ಒಟ್ಟು ಐವರು ಆರೋಪಿಗಳ ವಿರುದ್ಧ ತ್ರಿಸ್ಸೂರ್​ನಲ್ಲಿ ಹೊಸ ಪ್ರಕರಣವೂ ದಾಖಲಾಗಿದೆ. ಈ ಗ್ಯಾಂಗ್​ ವಿರುದ್ಧ ಈ ಹಿಂದೆಯೇ ಸಾಕಷ್ಟು ದೂರುಗಳು ದಾಖಲಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net