More

    ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ

    ತಿರುವನಂತಪುರಂ: ಮದುವೆ ಹೆಸರಲ್ಲಿ ಮಲಯಾಳಂ ನಟಿ ಶಾಮ್ನಾ ಕಾಸಿಂ ಬಳಿ ಹಣ ದೋಚಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಶಾಮ್ನಾ ಅವರ ತಾಯಿ, ಕೊಚ್ಚಿಯ ಮರಾಡು ಪೊಲೀಸ್​ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.

    ನಾಲ್ವರು ಆರೋಪಿಗಳು ತ್ರಿಸ್ಸೂರ್​ ಮೂಲದವರಾಗಿದ್ದು, ಅವರನ್ನು ವದನಪಲ್ಲಿಯ ರಫೀಖ್​, ಕಡವನೂರಿನ ರಮೇಶ್​, ಕೈಪಮಂಗಳಂದ ಶರತ್​ ಮತ್ತು ಚೆಟ್ಟುವಾದ ಅಶ್ರಫ್​ ಎಂದು ಗುರುತಿಸಲಾಗಿದೆ. ಮದುವೆ ಹೆಸರಿನಲ್ಲಿ ನಟಿಗೆ ವಂಚಿಸಲು ಆರೋಪಿಗಳು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಾಡುವಾಗ ಛಿದ್ರಗೊಂಡ ಮೆದುಳಿನ ರಕ್ತನಾಳ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

    ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ

    ಖದೀಮರ ಗ್ಯಾಂಗ್​ನಲ್ಲಿರುವ ಓರ್ವ ಆರೋಪಿ ಶಾಮ್ನಾ ಅವರ ಮೊಬೈಲ್​ ನಂಬರ್​ ಪಡೆದು ಆರಂಭದಲ್ಲಿ ತಾನೋಬ್ಬ ಶ್ರೀಮಂತ, ಕೊಳಿಕ್ಕೋಡ್​ ಮೂಲದ ಜ್ಯುವೆಲ್ಲರಿ ಮಾಲೀಕನಾಗಿದ್ದು, ದುಬೈನಲ್ಲಿ ಬಿಸಿನೆಸ್​ ನಡೆಸುತ್ತಿದ್ದೇನೆಂದು ನಂಬಿಸಿದ್ದಾನೆ. ನನ್ನ ಹೆಸರು ಅನ್ವರ್​ ಅಲಿ ಎಂದು ನಕಲಿ ಹೆಸರಿನ ಮೂಲಕ ಶಾಮ್ನಾ ಅವರ ಪರಿಚಯ ಮಾಡಿಕೊಂಡಿದ್ದಾನೆ. ಹೀಗೆ ಹಲವು ದಿನಗಳವರೆಗೆ ಮಾತನಾಡಿ ತುಂಬಾ ಹತ್ತಿರವಾಗಿದ್ದರು ಎಂದು ಮರಾಡು ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸಾಲದಕ್ಕೆ ಆರೋಪಿ ತನ್ನ ಕುಟುಂಬವನ್ನು ಶಾಮ್ನಾ ಅವರ ಕುಟುಂಬಕ್ಕೆ ಪರಿಚಯಿಸುವ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾನೆ. ಆ ಬಳಿಕ ಮದುವೆ ಪ್ರಸ್ತಾಪವನ್ನೂ ಮಾಡಿದ್ದಾನೆ. ಅನ್ವರ್​ ಕುಟುಂಬದೊಂದಿಗೆ ಮಾತಾನಾಡಿದ ಬಳಿಕ ಆತನನ್ನು ನಂಬಿದ್ದ ಶಾಮ್ನಾ ಕುಟುಂಬ, ಮದುವೆಗೂ ಒಪ್ಪಿಕೊಂಡಿತ್ತು. ಅಲ್ಲದೆ, ಶಾಮ್ನಾ ಅನ್ವರ್​ ತಂದೆ-ತಾಯಿಯೊಂದಿಗೂ ಮಾತನಾಡಿದ್ದರು. ಇನ್ನೊಬ್ಬರನ್ನು ನಂಬಿಸಲು ನಕಲಿ ಕುಟುಂಬ ಸದಸ್ಯರನ್ನು ತಂತ್ರಗಾರಿಕೆಯಾಗಿ ಆರೋಪಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ನಂಬಿದ್ದಾರೆ. ಇದನ್ನೂ ಓದಿ: 4 ತಿಂಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಹೊರತೆಗೆದ ಪೊಲೀಸರಿಗೆ ಕಾದಿತ್ತು ಶಾಕ್​!

    ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ

    ಎಲ್ಲವೂ ಆರೋಪಿ ಅಂದುಕೊಂಡಂತೆ ನಡೆದಿತ್ತು. ಎರಡು ಕುಟುಂಬದ ಭೇಟಿಗೆ ಜುಲೈ 3ಕ್ಕೆ ದಿನಾಂಕ ನಿಗದಿಯಾಗಿತ್ತು. ಜುಲೈ 3ರ ಸಂಜೆ ನಮ್ಮ ಕುಟುಂಬದ ಆರು ಮಂದಿ ನಿಮ್ಮ ಮನೆಗೆ ಬರುತ್ತೇವೆ ಎಂದು ಅನ್ವರ್​ ಹೇಳಿದ್ದ. ಅದಕ್ಕೂ ಮುಂಚೆ ಈ ವಾರ ಶಾಮ್ನಾರಿಗೆ ಕರೆ ಮಾಡಿದ ಅನ್ವರ್​, ನಮ್ಮ ಅಂಕಲ್​ ಮತ್ತು ಸೋದರಸಂಬಂಧಿಗಳು ತುರ್ತು ಕೆಲಸದ ಮೇರೆಗೆ ಕೊಳ್ಳಿಕೋಡ್​ನಿಂದ ಕೊಚ್ಚಿಗೆ ಆಗಮಿಸಿದ್ದಾರೆ. ಅವರು ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದ.

    ಅನ್ವರ್​ ಕುಟುಂಬದವರು ಹೇಳಿಕೊಂಡು 6 ಮಂದಿ ಶಾಮ್ನಾ ಮನೆಗೆ ಭೇಟಿ ನೀಡಿ 1 ಲಕ್ಷ ರೂ. ಹಣ ಕೇಳಿದ್ದರು. ಇದರಿಂದ ಅನುಮಾನಗೊಂಡ ಶಾಮ್ನಾ ಕುಟುಂಬ ಹಣ ನೀಡಲು ನಿರಾಕರಿಸಿದ್ದರು. ಬಳಿಕ ಹೊರ ಹೋಗುವಾಗ ಶಾಮ್ನಾ ಮನೆಯ ಹೊರಾಂಗಣ ಮತ್ತು ಕಾರನ್ನು ತಮ್ಮ ಮೊಬೈಲ್​ ಮೂಲಕ ವಿಡಿಯೋ ಮಾಡಿಕೊಂಡು ಹೋಗಿದ್ದರು.

    ಬಳಿಕ ಶಾಮ್ನಾ ಅನ್ವರ್​ಗೆ ಕರೆ ಮಾಡಿ ನಡೆದಿದ್ದನ್ನೆಲ್ಲಾ ಹೇಳಿದರು. ಬಳಿಕ ಇಬ್ಬರ ನಡುವಿನ ಮಾತುಕತೆ ವಾಗ್ವಾದಕ್ಕೆ ತಿರುಗಿ ತನ್ನ ವರಸೆ ಬದಲಿಸಿದ ಅನ್ವರ್​​, ಶಾಮ್ನಾಗೆ ಬೆದರಿಕೆ ಹಾಲಕು ಶುರು ಮಾಡಿದ. ನಿನ್ನ ವೃತ್ತಿಯನ್ನೇ ಕೊನೆಗಾಣಿಸುತ್ತೇನೆ, ಕೇಳಿದಷ್ಟು ಹಣ ಕೊಡದಿದ್ದರೆ ನನ್ನ ಬಳಿಯಿರುವ ನಿನ್ನ ಪೋಟೋಗಳು, ವಿಡಿಯೋಗಳು ಮತ್ತು ಮಸೇಜ್​ಗಳನ್ನು ಬಹಿರಂಗಪಡಿಸುತ್ತೇನೆಂದು ಬೆದರಿಕೆವೊಡ್ಡಿದ್ದಾನೆ. ಇದನ್ನೂ ಓದಿ: VIDEO| ಡೇಂಜರಸ್ ಶಾರ್ಕ್ ಬಾಯಿಗೆ ಕೈಹಾಕಿ ಕ್ಯಾಮರಾಗೆ ಪೋಸ್​ ನೀಡಿದ ವ್ಯಕ್ತಿ: ಮುಂದೇನಾಯ್ತು?

    ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ

    ಬಳಿಕ ಇದರಿಂದ ಎಚ್ಚೆತ್ತ ಶಾಮ್ನಾ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಶಾಮ್ನಾ ಬಳಿ ಮೊಬೈಲ್​ ನಂಬರ್​ ಪಡೆದು ಜಾಡು ಪತ್ತೆಹಚ್ಚಿದಾಗ ಮೊಬೈಲ್​ ನಂಬರ್​ ಅನ್ವರ್​ ಅಲಿ ಹೆಸರಿನಲ್ಲಿ ಇರಲಿಲ್ಲ. ಹೀಗಾಗಿ ಅನ್ವರ್​ ಎಂಬ ನಕಲಿ ಹೆಸರಿನಲ್ಲಿ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ.

    ಸದ್ಯ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇನ್ನು ಶಾಮ್ನಾ ಅವರ ಸಿನಿಮಾ ವಿಚಾರಕ್ಕೆ ಬಂದರೆ ಸಿನಿಮಾ ರಂಗದಲ್ಲಿ ಪೂರ್ಣ ಎಂದು ಗುರುತಿಸಿಕೊಂಡಿರುವ ಶಾಮ್ನಾ ಮಲಯಾಳಂ ಹಾಗೂ ತಮಿಳಿನಲ್ಲಿ ಸಾಕಷ್ಟು ಚಿತ್ರದಲ್ಲಿ ನಟಿಸಿದ್ದಾರೆ. ನಟ ಸೂರ್ಯ ನಟನೆಯ ಕಾಪ್ಪನ್​, ಜಯರಾಂ ಹಾಗೂ ವಿಜಯ್​ ಸೇತುಪತಿ ಅಭಿನಯದ ಮಾರ್ಕೋನಿ ಮಥಾಯಿ ಮತ್ತು ಮಮ್ಮೂಟ್ಟಿ ನಟನೆಯ ಒರು ಕುಟ್ಟನದನ್​ ಸೇರಿದಂತೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)

    ಕ್ವಾರಂಟೈನ್​ನಲ್ಲಿ ರವಿಶಂಕರ್ ಕುಟುಂಬ: ಗೆಳೆತನವೆಂದರೆ ಇದು, ಸುದೀಪ್​, ಗಣೇಶ್​, ಸೃಜನ್​ಗೆ ಧನ್ಯವಾದ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts