ಸಮಂತಾ ಶಾಕುಂತಲಂ: ಚಿತ್ರದ ಫಸ್ಟ್ ಲುಕ್ ಬಿಡುಗಡೆ

Samantha
Published on

‘ಶಾಕುಂತಲಂ’ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ ಎಂದಾಗಲೇ ಒಂದು ಕುತೂಹಲವಿತ್ತು. ಪೌರಾಣಿಕ ಚಿತ್ರದಲ್ಲಿ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ, ಲುಕ್ ಹೇಗಿರಲಿದೆ ... ಹೀಗೆ ಬಗೆಬಗೆ ಪ್ರಶ್ನೆಗಳು ಮೂಡತೊಡಗಿದ್ದವು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ‘ಶಾಕುಂತಲಂ’ ಚಿತ್ರದ ಸಮಂತಾ ಲುಕ್ ಸೋಮವಾರ ಬಿಡುಗಡೆಯಾಗಿದೆ.

ಶ್ವೇತ ವರ್ಣದ ಸೀರೆಯಲ್ಲಿ, ಪ್ರಾಣಿ ಪಕ್ಷಿಗಳ ಜತೆಗೆ ಕುಳಿತ ಭಂಗಿಯ ಲುಕ್​ಅನ್ನು ಚಿತ್ರತಂಡ ಹೊರತಂದಿದೆ. ಹಿಂದೆಂದೂ ಕಾಣಿಸದ ಅವತಾರದಲ್ಲಿ ಸಮಂತಾ ಎದುರಾಗಿದ್ದು, ಅವರ ಅಭಿಮಾನಿ ಬಳಗಕ್ಕೂ ಕಿರು ಉಡುಗೊರೆ ಕೊಟ್ಟ ಖುಷಿಯಲ್ಲಿದ್ದಾರೆ.

‘ಫ್ಯಾಮಿಲಿ ಮ್ಯಾನ್’ ಮತ್ತು ‘ಪುಷ್ಪ’ ಸಿನಿಮಾದ ಹಾಡಿನ ಮೂಲಕ ಹಿಂದಿ ಭಾಷಿಕರಿಗೂ ಸಮಂತಾ ಹತ್ತಿರವಾಗಿದ್ದಾರೆ. ಹಾಗಾಗಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಜತೆಗೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಗುಣಶೇಖರ್ ಚಿತ್ರ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net