ಬೇತಾಳನ ಬೆನ್ನಿಗೆ ನಿಂತ ಶಾರುಖ್​ ಖಾನ್​!

betaal
Published on

ಬಾಲಿವುಡ್ ಬಾದ್ಶಾ ‘ಜೀರೋ’ ಸಿನಿಮಾದ ಬಳಿಕ ಬೇರಾವ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಬದಲಿಗೆ ನಿರ್ಮಾಣ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಸಿನಿಮಾ, ವೆಬ್​ ಸಿರೀಸ್​ಗಳತ್ತ ಗಮನಹರಿಸಿದ್ದಾರೆ. ಇದೀಗ ಶಾರುಖ್​ ‘ಬೇತಾಳ’ನ ಬೆನ್ನು ಬಿದ್ದಿದ್ದಾರೆ. ಅಂದರೆ, ಬೇತಾಳ್​ ಹೆಸರಿನ ವೆಬ್​ಸಿರೀಸ್​ ನಿರ್ಮಾಣ ಮಾಡಿದ್ದು, ಮೇ. 24ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚೆಗಷ್ಟೇ ಅಮೆಜಾನ್​ ಪ್ರೈಮ್​ನಲ್ಲಿ ಅನುಷ್ಕಾ ಶರ್ಮಾ ನಿರ್ಮಾಣದ ‘ಪಾತಾಳ್​ ಲೋಕ್​’ ಬಿಡುಗಡೆ ಆಗಿತ್ತು. ಆ ವೆಬ್​ಸರಣಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅದರ ನಡುವೆಯೇ ಶಾರುಖ್​ ಖಾನ್​ ‘ಬೇತಾಳ’ನ ಜತೆ ಬಂದಿದ್ದಾರೆ. ಈ ಹಿಂದೆ ರಾಧಿಕಾ ಆಪ್ಟೆ ಮುಖ್ಯಭೂಮಿಕೆ ನಿಭಾಯಿಸಿದ್ದ ‘ಘೂಲ್​’ ಮಿನಿ ವೆಬ್​ಸರಣಿಯನ್ನು ನಿರ್ದೇಶನ ಮಾಡಿದ್ದ ಪ್ಯಾಟ್ರಿಕ್​ ಗ್ರಾಹಮ್​, ‘ಬೇತಾಳ’ನಿಗೂ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಕ್ರೈಂ ಥ್ರಿಲ್ಲರ್​ ಮತ್ತು ಹಾರರ್​ ಶೈಲಿಯಲ್ಲಿ ಬೇತಾಳ್​ ಮೂಡಿಬಂದಿದ್ದು, ಹಾರರ್ ಪ್ರಕಾರಗಳಲ್ಲೇ ಜಾಂಬಿ ಶೈಲಿಯ ಸಿರೀಸ್ ಇದಾಗಿದೆ. ಹಾಲಿವುಡ್​ನಲ್ಲಿ ಈಗಾಗಲೇ ಈ ಥರಹದ ಸಿನಿಮಾಗಳು ಮೂಡಿಬಂದಿದ್ದು, ಭಾರತದಲ್ಲಿ ಇಂಥ ಕಥೆಗಳು ಸೃಷ್ಟಿಯಾಗಿದ್ದು ತೀರಾ ಕಡಿಮೆ. ಇದೀಗ ಹೊಸದೊಂದು ಭಯವನ್ನು ಪರಿಚಯಿಸಲು ಬೇತಾಳ ಬರುತ್ತಿದೆ. ಈಗಾಗಲೇ ಅದರ ಟ್ರೇಲರ್​ ಸಹ ಬಿಡುಗಡೆ ಆಗಿದೆ. ವಿನೀತ್​ ಕುಮಾರ್, ಆಹಾನಾ ಕುಮಾರ, ಸುಚಿತ್ರ ಪಿಳೈ, ಮಂಜರಿ ಪುಪಾಲ ಮತ್ತು ಸ್ಯಾನಾ ಆನಂದ್​ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಹಿಂದೆ ಶಾರುಖ್​ ಒಡೆತನದ ರೆಡ್​ ಚಿಲ್ಲೀಸ್​ ಎಂಟರರಟೈನ್​ಮೆಂಟ್​ನಿಂದ ‘ಬಾರ್ಡ್​ ಆಫ್​ ಬ್ಲಡ್​’ ವೆಬ್​ಸಿರೀಸ್​ ನಿರ್ಮಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net