

ಜಮ್ಮು: ಬಾಲಿವುಡ್ ನಟ ಶಾರುಖ್ ಖಾನ್ ಇತ್ತೀಚೆಗಷ್ಟೇ ಮೆಕ್ಕಾಗೆ ಭೇಟಿ ನೀಡಿದ ವಿಷಯ ಗೊತ್ತಿರಬಹುದು. ಈಗ ಅವರು ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ಸದ್ದಿಲ್ಲದೆ ಭೇಟಿ ನೀಡಿದ್ದಾರೆ.
ಇದರ ಮೊದಲ ಹಂತವಾಗಿ, ಶಾರುಖ್ ಖಾನ್ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಭದ್ರತಾ ಸಿಬ್ಬಂದಿಯಿಂದ ಸುತ್ತುವರಿದ ಶಾರೂಖ್, ದೇವಸ್ಥಾನದ ಕಡೆಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಕಪ್ಪು ಜಾಕೆಟ್ ಧರಿಸಿರುವುದರಿಂದ ಅವರ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೂ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟವರು ಅವರೇ ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ 'ಡಂಕಿ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಶಾರೂಖ್ ಬಿಡುವು ಮಾಡಿಕೊಂಡು ಪವಿತ್ರ ನಗರವಾದ ಮೆಕ್ಕಾಗೆ ಭೇಟಿ ನೀಡಿದ್ದರು.